News Karnataka Kannada
Thursday, May 09 2024
ಅಂಕಣ

ನೆನಪಿನ ಬುತ್ತಿಗೆ ಮನೆಯೊಳಗೆ ಒಂದಿಷ್ಟು ಸ್ಥಳಾವಕಾಶ

Some space inside the house for memory
Photo Credit : Freepik

ನೆನಪು ಸವಿಯಾಗಿರುವ ಅನುಭವ. ನೆನಪು ಮೊದಲ ಪ್ರೀತಿಯಂತಿರುತ್ತದೆ. ನೆನಪು ಕಣ್ಣಂಚಿನಿಂದ ಕಾಣುವ ದೃಶ್ಯ ವೈಭವ. ಸದಾ ನಮ್ಮನ್ನು ಕಾಡುವ ಮಧುರ ಗೀತೆ.  ಜೀವನದಲ್ಲಿ ಬೆಂದು ಎದ್ದು ಉನ್ನತ ಸ್ಥಾನಕ್ಕೇರಿ ಯಶಸ್ಸಿನ ಉತ್ತುಂಗದಲ್ಲಿ ನಿಂತಾಗ ಕಣ್ಣು ಕೊಂಚ ಖುಷಿಯಿಂದ ಒದ್ದೆಯಾದರು ಹೃದಯ ಮಾತ್ರ ಒಂದು ರೀತಿಯ ಹಿತವಾದ ಅನುಭವನ್ನು ಅನುಭವಿಸಿರುತ್ತದೆ.
ಮನೆಯಂಗಳದಲ್ಲಿ ಈ ನೆನಪಿಗೆ ಓಂದಿಷ್ಟು ಸ್ಥಳಾವಕಶ ನೀಡುವುದಾದರೆ ಎಂದಾದರೂ ಯೋಚನೆ ಮಾಡಿದರೆ ಅದು ಉತ್ತಮವಾದ ಯೋಚನೆಯೇ ಸರಿ. ಯಾಕೆಂದರೆ ಜೀವನದಲ್ಲಿ ಯಾವತ್ತಾದರೂ ಸೋತ್ತಿದ್ದೇವೆ ಎಂದಾಗ ನಮ್ಮ ನೆನಪುಗಳು ನಮ್ಮನ್ನು ಹುರಿದಂಬಿಸಬಹುದು. ನಮ್ಮನ್ನು ಮೊದಲಿಗಿಂತಲು ಉತ್ತಮವಾದನ್ನು ಸಾಧಿಸಲು ಪ್ರೇರೆಪಿಸುತ್ತದೆ.

ಸಾಮಾನ್ಯವಾಗಿ ಮನೆಯಲ್ಲಿ ನಾವು ಮಕ್ಕಳ ಪೋಟೋವನ್ನು ಹೆಚ್ಚಾಗಿ ಕಾಣುತ್ತೇವೆ. ಬಾಲ್ಯದಿಂದ ಇಂದಿನ ವರೆಗಿನ ಪ್ರತಿಯೊಂದು ಹಂತದ ನೆನಪನ್ನು ಕಾಪಾಡಿಕೋಳ್ಳುತ್ತೇವೆ. ಅದೇ ಪರಿಕಲ್ಪನೆ ಇಂದು ಹೊಸ ಚಿಗುರು ಎನ್ನುವಂತೆ ವಾಲ್ ಆಪ್ ಫೆಮ್ ಆಗಿದೆ. ಮನೆಯೊಲ್ಲೊಂದು ‘ವಾಲ್ ಆಫ್ ಫೆಮ್ ’ ಎಂಬ ಪರಿಕಲ್ಪನೆಯು ಮನೆಯ ಅಂದವನ್ನು ಇಮ್ಮಡಿಗೊಳಿಸುವಲ್ಲಿ ಸಹಕಾರಿಯಾಗಿದೆ. ತಾತ, ಮುತ್ತಾತ, ಅಜ್ಜಿ, ಮಕ್ಕಳು, ಮೋಮ್ಮಕ್ಕಳು ಹೀಗೆ ಪೂರಾ ಪ್ಯಾಮಿಲಿಯ ಚಿತ್ರವನ್ನು ಗೋಡೆಯಲ್ಲಿ ಕಾಣಬಹುದು.

ಕೆಲಸ ಮಾಡುವ ಸ್ಥಳಗಳಲ್ಲಿ ನಾವು ಬೆಳೆದು ಬಂದಿರುವ ಹಾದಿಯನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. ಒಂದಿಷ್ಟು ನಮ್ಮ ಸಾಧನೆಯ ಮೊದಲ ಮೆಟ್ಟಿಲಿನ ಹೆಜ್ಜೆಯಿಂದ ನಡೆದು ಬಂದಂತಹ ಹಾದಿಯ ವರೆಗಿನ ನೆನಪನ್ನು ಭದ್ರವಾಗಿಸಲು ಇದಕ್ಕಿಂತ ಒಳ್ಳೆಯ ಉಪಾಯ ಬೆರೋಂದು ಇಲ್ಲ.

ಉದ್ಯಮಿಗಳು ತಮ್ಮ ವಾಲ್ ಆಫ್ ಫ್ರೇಮ್ ನಲ್ಲಿ ತಮ್ಮ ಆರಂಭಿಕ ಜೀವನದ ನೆನಪನ್ನು ಮೆಲುಕುಹಾಕಲು ಇಂತಹದಂದು ಪರಿಕಲ್ಪನೆಯನ್ನು ಅವಲಂಬಿಸಿರುತ್ತಾರೆ. ಕೆಲವರು ತಮ್ಮ ಮನೆಯಲ್ಲಿ ‘ಪ್ಯಾಮಿಲಿ ಟ್ರೀ’ ಮುಖಾಂತರನೂ ತಮ್ಮವರ ನೆನಪನ್ನು ಸದಾ ಹಸಿರಾಗಿಸಿ ಇಟ್ಟುಕೊಳ್ಳುತ್ತಾರೆ.

ವಿವಿಧ ರೀತಿಯಲ್ಲಿ ಡಿಸೈನಿಂಗ್ ವಾಲ್ ಆಫ್ ಫ್ರೇಮ್ ಇಂದು ಆಧುನಿಕ ಮನೆಯಲ್ಲಿ ಕಾಣಸಿಗುತ್ತದೆ. ಪೋಟೋಗೆ ತಕ್ಕಂತೆ ಡಿಸೈನಿಂಗ್ ಪ್ರೇಮ್‌ಗಳು ಮಾರುಕಟ್ಟೆಗಳಲ್ಲಿಯೂ ಲಭ್ಯ. ತಮ್ಮ ಮನೆಯ ಸ್ಥಳವಾಕಾಶ ನೋಡಿಕೊಂಡು ಸರಿಯಾದ ರೀತಿಯಲ್ಲಿ ರೂಪುರೇಷೆಯನ್ನು ಸಿದ್ಧಪಡಿಸಿಕೊಂಡು ಉತ್ತಮವಾದ ವಾಲ್ ಆಫ್ ಫೆಮ್‌ನ್ನು ರೆಡಿಮಾಡಿಕೊಳ್ಳಬೇಕು.

ನಮ್ಮ ಮನೆಯ ಗೋಡೆಗೆ, ಬಣ್ಣಗೆ ಸೂಕ್ತವಾಗುವಂತಹ ಪ್ರೇಮ್ ಗಳನ್ನು ಆಯ್ಕೆ ಮಾಡಬೇಕು. ಆಗಿದಲ್ಲಿ ಮಾತ್ರ ಅದ್ಭುತ ಲೋಕವನ್ನು ಸಷ್ಟಿಸಬಹುದು. ಇಂದಿನ ಯುಗದಲ್ಲಿ ಜನರು ತಮ್ಮ ಸಾಧನೆಗಳನ್ನು, ಸಣ್ಣಪುಟ್ಟ ನೆನಪನ್ನು ಮನೆಯಲ್ಲಿ ತಮ್ಮ ಕಣ್ಣುಮುಂದೆ ಸದಾ ಇರಲಿ ಎಂದು ಆಶಿಸುತ್ತಾರೆ. ಮನೆಗೆ ಬರುವ ನಮ್ಮ ಅತಿಥಿಗಳ ಕಣ್ಣಿಗೆ ಇದು ಅದ್ಭುತ ಅನಿಸಿಕೊಳ್ಳಬಹುದು.

ಜೊತೆಗೆ ನಮ್ಮ ಸುತ್ತ ಮುತ್ತಲಿನ ಪ್ರಪಂಚವು ಎಷ್ಟು ಸುಂದರವಾಗಿದೆ ಎಂದು ಎಲ್ಲರಿಗೂ ಭಾಸವಾಗುತ್ತದೆ. ನಮ್ಮ ದಿನವನ್ನು ಉತ್ತಮ ರೀತಿಯಲ್ಲಿ, ತಿಳಿಯಾದ ಮನಸ್ಸಿನಿಂದ ಶುರು ಮಾಡಲು ಇದಕ್ಕಿಂತ ಉತ್ತಮ ಉಪಾಯ ಬೇರೆನೂ ಸಿಗದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು