News Karnataka Kannada
Friday, May 03 2024
ಅಂಕಣ

ಮನೆಯ ಬಾಗಿಲುಗಳು ಮುಖ್ಯ ಆಕರ್ಷಣೆಯ ಕೇಂದ್ರ ಬಿಂದು

The doors of the house are the focal point of the main attraction
Photo Credit : Wikimedia

ಮುಂಭಾಗದ ಬಾಗಿಲು ಸಾಮಾನ್ಯವಾಗಿ ಮನೆಯ ಮುಂಭಾಗದ ಕೇಂದ್ರ ಬಿಂದುವಾಗಿದೆ. ಸಂದರ್ಶಕರು ಬಂದಾಗ ನೋಡುವ ಮೊದಲ ವಿಷಯ ಹಾಗೂ ಅವರು ಹೊರಡುವಾಗ ಅವರು ಯೋಚಿಸುವ ಕೊನೆಯ ವಿಷಯ ಆಗಿದೆ. ಬಾಗಿಲುಗಳು ಭದ್ರತೆ ಮತ್ತು ಗೌಪ್ಯತೆಯನ್ನು ಒದಿಗಿಸುವ ಮನೆಯ ಕ್ರಿಯಾತ್ಮಕ ಘಟಕಗಳಾಗಿ, ಮನೆಯ ಕೇಂದ್ರ ಬಿಂದುವೂ ಆಗಿರುತ್ತದೆ.

ಭಾರತೀಯ ಶೈಲಿಯಿಂದ ಹಿಡಿದು ಈಗೀನ ಆಧುನಿಕ ಶೈಲಿಯ ಬಾಗಿಲು ಅಲಂಕಾರಿಕ ಥೀಮ್‌ನಲ್ಲಿ ಆಕರ್ಷಕ ಬಾಗಿಲುಗಳನ್ನು ಬಳಸಬಹುದಾಗಿದೆ. ಮುಖ್ಯವಾಗಿ ಡಬಲ್ ಡೋರ್ ವಿನ್ಯಾಸಗಳು ಮೊದಲ ನೋಟಕ್ಕೆ ಉತ್ತಮ ಅಭಿಪ್ರಾಯವನ್ನು ಮೂಡಿಸುತ್ತದೆ. ಜನರನ್ನು ಮೆಚ್ಚಿಸುವಂತಹ ವಿನ್ಯಾಸವನ್ನು ಹೊಂದಿರುತ್ತದೆ.

ಮರವು ಭಾರತದಲ್ಲಿ ಅತ್ಯಂತ ಜನಪ್ರಿಯ ಡೋರ್ ಡಿಸೈನ್‌ನ ಆಯ್ಕೆಯಾಗಿದೆ. ಏಕೆಂದರೆ ಅದರ ವಿಭಿನ್ನ ಗುಣ, ಶೈಲಿ ಮತ್ತು ಸುಲಭವಾಗಿ ಲಭ್ಯವಿರುವಂತಹ ಸಾಮಗ್ರಿಗಳಲ್ಲಿ ಒಂದು. ಮರದ ಬಾಗಿಲುಗಳಲ್ಲಿ ಮಡಚುವ ಬಾಗಿಲುಗಳು, ಜಾರುವ ಬಾಗಿಲು, ಸಿಂಗಲ್ ಡೋರ್‌ಗಳು ಮತ್ತು ಡಬಲ್ ಡೋರ್ ಡಿಸೈನ್‌ಗಳಂತಹ ವಿಭಿನ್ನ ವಿನ್ಯಾಸಗಳಲ್ಲಿ ಬಾಗಿಲನ್ನು ರಚಿಸಬಹುದು.
ಬಾಗಿಲಲ್ಲಿ ಸಾಂಪ್ರದಾಯಿಕ ಕೆತ್ತನೆಗಳೊಂದಿಗೆ ಪ್ರವೇಶದ್ವಾರಕ್ಕೆ ದೇಸಿ ಸ್ಪರ್ಶವನ್ನು ನೀಡಬಹುದು. ಸರಳ ಕೆತ್ತನೆಯ ಮರದ ವಿನ್ಯಾಸ ಅದರಲ್ಲೂ ಪಕ್ಷಿ, ಪ್ರಾಣಿ, ಹೂವು, ದೇವಾನುದೇವತೆಗಳ ಸುಂದರ ಕೆತ್ತನೆಯ ಚಿತ್ರಗಳ ವಿನ್ಯಾಸವು ತುಂಬಾ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಬಾಗಿಲಿಗೆ ಆಕರ್ಷಕವಾದ ಮರ ಮತ್ತು ಗಾಜಿನ ಅಳವಡಿಕೆಯ ವಿನ್ಯಾಸ ಒಳ್ಳೆಯ ಕಾಂಬಿನೇಶನ್. ಹೆಚ್ಚಾಗಿ ಸಿಂಗಲ್ ಡೋರ್ ವಿನ್ಯಾಸವು ಅಪಾರದರ್ಶಕ ಗಾಜನ್ನು ಬಳಸುವುದರಿಂದ ಗಾಜಿನ ಸೊಬಗನ್ನು ಹೆಚ್ಚಿಸುತ್ತದೆ.

ಡಬಲ್ ಡೋರ್ ವಿನ್ಯಾಸದ ಬಾಗಿಲು ಭವ್ಯವಾದ ಕೋಟೆಯ ಪ್ರವೇಶದ್ವಾರದಂತೆ ಕಾಣುವಂತೆ ಮಾಡುತ್ತದೆ.ಇದು ಭಾರತೀಯ ಶೈಲಿಯ ಮರದ ಮುಖ್ಯ ಬಾಗಿಲಿನ ವಿನ್ಯಾಸಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಕೆತ್ತನೆಗಳು ಮತ್ತು ಹೊಳೆಯುವ ಕೇಂದ್ರವು ಬಾಗಿಲನ್ನು ಸುಂದರವಾಗಿಸುತ್ತದೆ.

ಮರ, ಲೋಹ ಮತ್ತು ಗಾಜಿನ ಮೂರು ಧಾತುಗಳನ್ನು ಒಟ್ಟಿಗೆ ಬಳಸಿ ವಿನ್ಯಾಸಗೊಳಿಸುವ ಬಾಗಿಲು ನೋಡುಗರ ನೋಟವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಸರಳ ಬಣ್ಣದ ಲೇಪನದ ಬಾಗಿಲು ಸಾಮಾನ್ಯ ಮನೆಯನ್ನು ಸುಂದರ ವಿನ್ಯಾಸದ ಮನೆಯನ್ನಾಗಿಸುತ್ತದೆ. ವಾಸ್ತುಶಿಲ್ಪದ ಒಂದು ದೊಡ್ಡ ತುಣುಕು ಅದರ ಬಾಹ್ಯ ವಿನ್ಯಾಸವನ್ನು ಒಟ್ಟಿಗೆ ಬಂಧಿಸಲು ಸಾಕಷ್ಟು ವಿಶಿಷ್ಟತೆಯನ್ನು ನೀಡುತ್ತದೆ.

ಮುಂಭಾಗದ ಬಾಗಿಲು ನಮ್ಮ ಮನೆಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ಯಾವಾಗಲೂ ಉತ್ತಮ ಸ್ಥಿತಿಯಲ್ಲಿರಬೇಕು. ನಮ್ಮ ಮನೆಯ ಬಾಹ್ಯ ನೋಟವು ಮನೆಯ ಒಳಾಂಗಣದಷ್ಟೆ ಮಹತ್ವದ್ದಾಗಿದೆ. ಮನೆಯ ದ್ವಾರವು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲದೆ ಭದ್ರತೆ ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ ಕೆಲವೊಂದು ವಿನ್ಯಾಸವುಳ್ಳ ಬಾಗಿಲು ಅತ್ಯಂತ ದೃಢ ಮತ್ತು ಸುಂದರವಾದ ಮುಖ್ಯ ಬಾಗಿಲುಗಳಾಗಿವೆ. ಆದ್ದರಿಂದ, ನಮ್ಮ ಮನೆಗೆ ಸೂಕ್ತವಾದ ಬಾಗಿಲನ್ನು ಆಯ್ಕೆ ಮಾಡಲು ಸೂಕ್ತ ವಿನ್ಯಾಸ ಸ್ಫೂರ್ತಿದಾಯವಾಗಿದೆ.

ಮನೆ ಬಾಗಿಲು ಕೇವಲ ಬಾಗಿಲಲ್ಲ ಅದು ರಕ್ಷಕವಚವು ಆಗಿರುತ್ತದೆ. ಆದ್ದರಿಂದ ಮನೆ ನಿರ್ಮಾಣದ ಹಂತದಲ್ಲಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಬೇಕು ಹಾಗೂ ಸಾಕಷ್ಟು ಗಮನ ಹರಿಸಬೇಕು. ನಮ್ಮ ಮನೆಯ ವಿನ್ಯಾಸಕ್ಕೆ ಬಣ್ಣಕ್ಕೆ ಸೂಕ್ತ ಎನಿಸುವ ಬಾಗಿಲನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು