News Karnataka Kannada
Wednesday, May 08 2024
ಅಂಕಣ

ಭಕ್ತಿ ಭಾವಕ್ಕೆ ಮನೆಯೊಳಗೆ ಒಂದು ದೇವ ಮಂದಿರ

A temple of god inside the house for devotion
Photo Credit : Freepik

ನಮ್ಮ ಮನೆಯ ಪ್ರತಿಯೊಂದು ಪೀಠೋಪಕರಣಗಳು, ಕೊಠಡಿಯು ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ. ಮನೆಯ ಬಣ್ಣ, ಬಾಗಿಲು, ಅಡುಗೆ, ಮನೆ ಬಾಲ್ಕನಿ ಹೀಗೆ ಪ್ರತಿಯೊಂದು ಸಂಗತಿಗೂ ವಿಶೇಷ ಕಾಳಜಿ ವಹಿಸುತೇವೆ. ಮನೆಯ ಮುಖ್ಯ ಅಂಗವಾಗಿರುವ ಪೂಜಾ ಮಂದಿರಗಳು ವಿಶೇಷ ಸ್ಥಾನ ಪಡೆಯುತ್ತದೆ.

ಮನೆಯೊಳಗೆ ಏಕಾಗ್ರತೆ ಮನಶಾಂತಿ ಇವೆಲ್ಲದಕ್ಕು ಮುಖ್ಯ ಮೂಲಾಂಶವೇ ದೇವರ ಕೋಣೆ ಇದು ನಮ್ಮ ಅಚಲವಾದ ನಂಬಿಕೆ ಮತ್ತು ನಮ್ಮ ಭಕ್ತಿಯ ದೃಡತೆಯ ಸಾಕ್ಷಿಯಾಗಿದೆ.

ಪ್ರತಿಯೊಂದು ಧರ್ಮದಲ್ಲಿ ಮನೆಯ ಪೂಜಾ ಮಂದಿರದ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಇದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಸಂಪ್ರಾದಾಯಗಳಿಗೆ ತಕ್ಕಂತೆ ಪೂಜಾ ಕೋಣೆ ಮತ್ತು ಅದರ ಬಣ್ಣಗಳಿಗೆ ವಿಶೇಷ ಒತ್ತು ನೀಡಾಲಾಗುತ್ತಿದೆ. ಇಲ್ಲೂ ವಿಶೇಷವಾಗಿ ಕಾಳಜಿ ವಹಿಸಬೇಕಾಗುತ್ತದೆ.

ಇಂದು ವಿಶೇಷ ವಿನ್ಯಾಸದ ಕೆತ್ತನೆಯ ಮರದ ರೆಡಿಮೆಡ್ ಪೂಜಾಮನೆಗಳು ಸಿಗುತ್ತವೆ. ಅದು ವಿವಿಧ ವಿನ್ಯಾಸದಲ್ಲಿ ಮಂಟಪ, ಸ್ಟಾಂಡ್, ಸ್ಟೀಲ್ ಮಂಟಪ, ಗೋಡೆಗೆ ಫಿಕ್ಸ್ ಮಾಡುವಂತಹ ವಿಭಿನ್ನ ಮರದ ಆಕೃತಿ ಮನೆಮಂಟಪಗಳು ಲಭ್ಯ.

ಇನ್ನು ಕೆಲವರು ತಮ್ಮ ಮನೆಗೆ ಸೂಕ್ತ ಎನಿಸುವ ಮಂಟಪವನ್ನು ತಮ್ಮಗೆ ಬೇಕಾಗುವ ರೀತಿಯಲ್ಲಿ ಮರದ ಕೆತ್ತನೆಯ ಕೆಲಸದವರ ಹತ್ತಿರ ಮಾಡಿಸಿಕೊಳ್ಳುತ್ತಾರೆ. ಭಕ್ತಿ ಭಾವಕ್ಕೆ ಅನುಗುಣ ತಕ್ಕಂತೆ, ತಮ್ಮ ಮನೆಯ ಸ್ಥಳಾವಕಾಶ ತಕ್ಕಂತೆ ಪೂಜ ಮಂದಿರವನ್ನು ಸೃಷ್ಟಿಸುತ್ತಾರೆ.

ನಮ್ಮ ಯಾವುದೇ ಕೆಲಸ ದೇವರ ಅನುಗ್ರಹ ಮತ್ತು ಆಶೀರ್ವಾದವಿಲ್ಲದೆ ಕಾರ್ಯವು ಸುಲಭವಾಗಿ ಅಥವಾ ಯಶಸ್ವಿಯಾಗಿ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಕಾರ್ಯ ಸಿದ್ದಿಯಾದಗ ಕೃತಜ್ಞತೆಯನ್ನು ಅರ್ಪಿಸಲು ಸೂಕ್ತ ಸ್ಥಳಾವಕಾಶ ಅಗತ್ಯವಾಗಿರುತ್ತದೆ.

ಮನೆಯಲ್ಲಿ ಭಕ್ತಿ ಭಾವ ಹೆಚ್ಚಾದಗಳೆಲ್ಲಾ ಭಜನೆ ಪ್ರಾರ್ಥನೆಗೆ ಮುಕ್ತ ಅವಕಾಶಗಳು ಒದಗುವಂತಿರಬೇಕು. ನಮ್ಮ ಮನೆಯ ಮಂದಿರದಲ್ಲಿರುವ ದೇವರನ್ನು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸರಾಗವಾಗಿ ದರ್ಶನ ಪಡೆಯಬಹುದು.

ಎಷ್ಟೋ ಮಂದಿ ದೇವರ ಕೋಣೆಯ ಬಾಗಿಲಿಗೆ ಪುಟ್ಟ ಪುಟ್ಟ ಗಂಟೆಯನ್ನು ನೇತಾಡಿಸುತ್ತಾರೆ. ಇದರಿಂದ ದೇವರ ಕೋಣೆ ಬಾಗಿಲು ತೆರೆದಾಗಲೆಲ್ಲಾ ಗಂಟೆಯ ನಾದ ದೈವ ಭಕ್ತರಲ್ಲಿ ಭಕ್ತಿ ಭಾವ ಹರಿಯುವುದು. ಇದರಿಂದ ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿ ನೆಲೆಸಿ ಮನೆಮಂದಿಯವರೆನ್ನೆಲ್ಲಾ ಕೆಟ್ಟ ಶಕ್ತಿಯಿಂದ ಕಾಪಾಡಲೂ ಸದಾ ಸಹಕಾರಿ.

ಸ್ಟೀಲ್‌ನ ಧಾತುನಿಂದ ಮಡಿರುವ ಮಂಟಪ ಬೆಳ್ಳಿಯಂತೆ ಹೋಳಯುವುದರಿಂದ ಪೂಜಾ ಮಂದಿರಕ್ಕೆ ವಿಶೇಷತೆಯನ್ನು ಹೆಚ್ಚಿಸುತ್ತದೆ.ಕಂಚಿನ ಮಂಟಪ್ಪವು ಅಪ್ಪಟ್ಟ ಚಿನ್ನದಂತೆ ಹೋಳೆಯುತ್ತದೆ. ಯಾವುದೋ ದೇವಸ್ಥಾನದ ಗರ್ಭಗುಡಿಯನ್ನು ಕಂಡತೆ ಭಾಸವಾಗುತ್ತದೆ.

ಆಯಾ ಧರ್ಮಕ್ಕೆ ಅನುಗುಣವಾಗಿ ಹೆಚ್ಚು ಒತ್ತು ನೀಡಿ ಪೂಜಾ ಮಂದಿರಗಳನ್ನು ತಯಾರಿಸಲಾಗುತ್ತದೆ. ಬಣ್ಣ, ಪೂಜಾ ಸಾಮಾಗ್ರಿಗಳು ಇನ್ನಿತರ ಅವಶ್ಯಕ ವಸ್ತುಗಳನ್ನು ಇಡಲು ಸೂಕ್ತ ಸ್ಥಳವಕಾಶವನ್ನು ನೀಡಬೇಕಾಗುತ್ತದೆ.

ಮರದ ಪೂಜಾ ಮಂದಿರವೂ ಧ್ಯಾನ, ಪೂಜೆ ಪಠಣ ಮತ್ತು ಪ್ರಾರ್ಥನೆಗಳ ಉದ್ದೇಶಕ್ಕಾಗಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಪೂಜಾ ಮಂದಿರಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಮತ್ತು ಆತ್ಮವನ್ನು ಶುದ್ದಿಗೊಳಿಸುತ್ತದೆ. ನಮ್ಮ ಮಕ್ಕಳಲ್ಲಿ ಉತ್ತಮ ನೈತಿಕತೆ ಮತ್ತು ಭಾರತೀಯ ಸಂಪ್ರದಾಯಗಳನ್ನು ಕಲಿಸುತ್ತದೆ. ಇಡೀ ಕುಟುಂಬವು ಯುವಕರು ಅಥವಾ ಹಿರಿಯರು ವಿಶೇಷವಾಗಿ ನಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊAಡು ನಡೆಸಲು ಪೂಜಾ ಮಂದಿರಗಳು ಸಹಕಾರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು