News Karnataka Kannada
Sunday, April 28 2024
ಗುಜರಾತ್

ಗುಜರಾತ್: ಮೋದಿಯವರ ಗುಜರಾತಿ ಕವನ ಸಂಕಲನದ ಇಂಗ್ಲಿಷ್ ಆವೃತ್ತಿ ಆಗಸ್ಟ್‌ನಲ್ಲಿ ಲೋಕಾರ್ಪಣೆ

Gujarat: English edition of Pm Modi's Gujarati poetry collection to be launched in August
Photo Credit : Twitter

ಗುಜರಾತ್:  ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಗುಜರಾತಿ ಕವನ ಸಂಕಲನದ ಇಂಗ್ಲಿಷ್ ಆವೃತ್ತಿ ಲೆಟರ್‍ಸ್ ಟು ಸೆಲ್ಫ್ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಪತ್ರಕರ್ತೆ ಹಾಗೂ ಇತಿಹಾಸಕಾರರಾದ ಭಾವನಾ ಸೋಮಾಯಾ ಆಂಗ್ಲ ಆವೃತ್ತಿಯನ್ನು ಭಾಷಾಂತರಿಸಿದ್ದಾರೆ. ಮೋದಿ ಅವರು ಸುದೀರ್ಘ ವರ್ಷಗಳಲ್ಲಿ ಬರೆದಂತಹ ಗುಜರಾತಿ ಕವನಗಳ ಸಂಕಲನ 2007ರಲ್ಲಿ ಬಿಡುಗಡೆಯಾಗಿತ್ತು. ಮುಖ್ಯವಾಗಿ ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಬದುಕಿನ ಒತ್ತಡಗಳ ಬಿಂಬಿಸುವ ಆಂಖ್ ಆ ಧನ್ಯ ಮತ್ತಿತರ ಹಲವು ಚಿತ್ತಾಕರ್ಷಕ ಕವನಗಳು ಗಾಢ ವಿಮರ್ಶೆ, ಚಿಂತನೆಯಿಂದ ಸಂಪನ್ನಗೊಂಡಿವೆ.

ಛಂದಸ್ಸುಗಳಿಂದ ತುಂಬಿದ್ದು, ಅತ್ಯಂತ ಪ್ರಾಸಬದ್ಧವಾಗಿವೆ. ಪ್ರಕೃತಿ ಬಗ್ಗೆ ಅಥವಾ ಜೀವನದ ಹಲವು ಜಂಜಾಟ ಕುರಿತು ತಮ್ಮ ಚಿಂತನೆ, ಕನಸುಗಳು ಮತ್ತು ಕಳವಳ ಇತ್ಯಾದಿಗಳನ್ನು ಮೋದಿ ಕವನಗಳ ಮುಖೇನ ಜಗತ್ತಿನ ಜತೆ ಹಂಚಿಕೊಂಡಿದ್ದಾರೆ. ಫಿಂಗರ್‌ಪ್ರಿಂಟ್ ಪ್ರಸ್ತುತ ಕಾವ್ಯದ ಪ್ರಕಾಶಕರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು