News Karnataka Kannada
Sunday, April 28 2024
ಸಮುದಾಯ

ಚಿಕ್ಕಮಗಳೂರು: ಹೊಗರೇಖಾನ್ ಗಿರಿ ಶ್ರೀ ಸಿದ್ದೇಶ್ವರಸ್ವಾಮಿ ರಥೋತ್ಸವ

Hogarekhangiri Sri Siddeshwaraswamy Rathotsava
Photo Credit : News Kannada

ಚಿಕ್ಕಮಗಳೂರು: ಹೊಗರೇಖಾನ್ ಗಿರಿಯ ಶ್ರೀಸಿದ್ದೇಶ್ವರಸ್ವಾಮಿ ರಥೋತ್ಸವದ ಧಾರ್ಮಿಕಕಾರ್ಯಕ್ರಮಗಳು ಶುಕ್ರವಾರ ತಡರಾತ್ರಿ ಸಂಪನ್ನಗೊಂಡವು.

ಬೀರೂರು ಸಮೀಪದ ಹೊಗರೇಖಾನ್ ಗಿರಿ ಪಶ್ಚಿಮಘಟ್ಟಸಾಲಿನ ಹಸಿರು ವನಸಿರಿ-ಖನಿಜನಿಧಿಯ ನಡುವೆ ನೆಲೆಸಿರುವ ಸಿದ್ದೇಶ್ವರಸ್ವಾಮಿ ಸುತ್ತಮುತ್ತಲಿನ ಹತ್ತಾರು ಗ್ರಾಮದ ಆರಾಧ್ಯದೈವ. ವಸಂತvಋತು, ಚೈತ್ರಮಾಸ, ಶುಕ್ಲಪಕ್ಷ ತ್ರಯೋದಶಿ ಪುಬ್ಬನಕ್ಷತ್ರದಲ್ಲಿ ಬೆಟ್ಟದಮೇಲೆ ರಥೋತ್ಸವವು ಸಾವಿರಾರುಭಕ್ತರ ಹರ್ಷೋದ್ಘಾರಗಳೊಂದಿಗೆ ನಡೆಯಿತು.

ಸುಡುಬಿಸಿಲಿನಲ್ಲೂ ಜಮಾಯಿಸಿದ್ದ ಭಕ್ತರು ಹೂವು-ಹಣ್ಣು ರಥದತ್ತ ತೂರಿ ಮುಗಿಲುಮುಟ್ಟುವ ಸಿದ್ದೇಶ್ವರಸ್ವಾಮಿಯ ಜಯಕಾರದೊಂದಿಗೆ ರಥ ಎಳೆದು ಶ್ರದ್ಧಾಭಕ್ತಿಯನ್ನು ಸಮರ್ಪಿಸಿದರು. ಜಂಗಮಬಳಗದ ಶಿವಸಂಕೀರ್ತನೆ ಗಮನಸೆಳೆಯಿತು. ಪರಂಪರಾನುಗತವಾಗಿ ಬಂದ ರಾಗಿಮುದ್ದೆ, ಪಾಯಸ, ಸೊಪ್ಪಿನಸಾರು, ಹಲಸಿನಬಡುಕು ಹುಳಿ, ಮಾವಿನಕಾಯಿಚಟ್ನಿ, ಕಡಲೆಕಾಳು ಈರುಳ್ಳಿಗೊಜ್ಜು ಪ್ರಸಾದವನ್ನು ಸಾಮೂಹಿಕವಾಗಿ ಸಾವಿರಾರು ಭಕ್ತರು ಸ್ವೀಕರಿಸಿದರು.

ಜಾತ್ರಾ ಕಾರ್ಯಕ್ರಮಗಳನ್ನು ಹೊಗರೇಖಾನ್ ಮಠದ ಆವರಣದಲ್ಲಿ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್.ಎಸ್.ಉಮಾಮಹೇಶ್ವರಯ್ಯ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಗುಹಾಂತರ ದೇವಾಲಯದ ಮಠದ ಮೂಲಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರಾದಿ ಪೂಜಾಕಾರ್‍ಯಗಳು ನಡೆದವು. ರಾತ್ರಿ ಹೊಗರೇಹಳ್ಳಿಯ ಶ್ರೀಸಿದ್ದೇಶ್ವರಸ್ವಾಮಿ ದೇಗುಲದಲ್ಲಿ ಮದುವಣಿಗೆ ಶಾಸ್ತ್ರ, ತಡರಾತ್ರಿ ನಂದಿವಾಹನೋತ್ಸವ ನೆರವೇರಿತು.

ಶನಿವಾರ ಶ್ರೀಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ನವಿಲು ಉತ್ಸವ, ಭಾನುವಾರ ಕುದುರೆವಾಹನೋತ್ಸವ, ರಾತ್ರಿ ಕಲ್ಯಾಣೋತ್ಸವ, ತಡರಾತ್ರಿ ೧೨ಗಂಟೆಗೆ ಗಜವಾಹನೋತ್ಸವ ನಡೆಯಿತು. ಸೋಮವಾರ ಪಲ್ಲಕ್ಕಿಉತ್ಸವ, ಮಂಗಳವಾರ ಮಹಾರಥೋತ್ಸವದ ನಂತರ ೧೦೧ ಎಡೆಸೇವೆ, ಬಲಿಪೂಜೆ, ಸಂತರ್ಪಣೆ ನಡೆಯಿತು.

ಬುಧವಾರ ಓಕಳಿ, ಉಯ್ಯಾಲೆ ಉತ್ಸವ, ನಿನ್ನೆ ರಾತ್ರಿ ವಿಶೇಷಪೂಜೆಯೊಂದಿಗೆ ಜಾತ್ರಮಹೋತ್ಸವ ಸಂಪನ್ನಗೊಂಡಿತು. ಗಿರಿಯಮೇಲೆ ಹಾಗೂ ಹೊಗರೇಹಳ್ಳಿಯ ದೇವಸ್ಥಾನಗಳಲ್ಲಿ ಪೂಜಾದಿಉತ್ಸವಗಳು ಉಮಾಮಹೇಶ್ವರಯ್ಯ, ಹರಿಶ್ಚಂದ್ರಕುಮಾರ್, ಶಿವಾನಂದಯ್ಯ, ಚಂದ್ರಶೇಖರಯ್ಯ, ಅರ್ಚಕ ರುದ್ರಯ್ಯ ಮತ್ತಿತರರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು