ಅಹಮದಾಬಾದ್: ವಿಲ್ ಜ್ಯಾಕ್ಸ್ ಅವರ ಶತಕ ಬಾರಿಸಿದ್ದು ಅವರ ಭರ್ಜರಿ ಬ್ಯಾಟಿಂಗ್ಗೆ ಫ್ಯಾನ್ಸ್ ಫಿದ ಆಗಿದ್ದಾರೆ. ಇನ್ನು ವಿರಾಟ್ ಕೊಹ್ಲಿಯ(70*) ಅರ್ಧಶತಕದ ಸೊಗಸಾದ ಬ್ಯಾಟಿಂಗ್ ನೆರವಿನಿಂದ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ 9 ವಿಕೆಟ್ಗಳ ಗೆಲುವು ಸಾಧಿಸಿದೆ.
ಇದು ಆರ್ಸಿಬಿಗೆ 10 ಪಂದ್ಯಗಳಲ್ಲಿ ಒಲಿದ ಕೇವಲ ಮೂರನೇ ಗೆಲುವಾಗಿದೆ. ಗೆಲುವು ಕಂಡರೂ ಕೂಡ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.