News Karnataka Kannada
Monday, May 06 2024
ಅಡುಗೆ ಮನೆ

ಸುಲಭವಾದ ಪನೀರ್ ಪಕೋಡ ರೆಸಿಪಿ ಇಲ್ಲಿದೆ ನೋಡಿ

Here's an easy paneer pakoda recipe
Photo Credit : News Kannada

ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ನೋಡೋಣ .

ಬೇಕಾಗುವ ಸಾಮಗ್ರಿಗಳು:
ಪನೀರ್ ಕ್ಯೂಬ್ಸ್ – 500 ಗ್ರಾಂ
ಕಡ್ಲೆ ಹಿಟ್ಟು – 1 ಕಪ್
ಅಚ್ಚಖಾರದ ಪುಡಿ – 1 ಚಮಚ
ಅರಶಿಣ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ – ಅರ್ಧ ಚಮಚ
ಅಡುಗೆ ಸೋಡಾ – 1 ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಚಾಟ್ ಮಸಾಲ – ಸ್ವಲ್ಪ

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಶಿಣ ಮತ್ತು ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಮಿಶ್ರಣವನ್ನು ಮಾಡಿಕೊಳ್ಳಿ.
ಈಗ ಪನೀರ್ ಕ್ಯೂಬ್ಸ್ ಅನ್ನು ಈ ಮಿಶ್ರಣದಲ್ಲಿ ಚನ್ನಾಗಿ ಅದ್ದಿ,  ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ  ಕಾದ ಬಳಿಕ ಅದಕ್ಕೆ  ಮಿಶ್ರಣದಲ್ಲಿ ಅದ್ದಿದ ಪನೀರ್ ಕ್ಯೂಬ್ಸ್ ಅನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿಕೊಂಡು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿ ತಿನ್ನಲು ಕೊಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು