ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆಯ ರಂಗೇರಿದೆ. ಈ ಹಿನ್ನಲೆ ಭಾರತದ ಚುನಾವಣಾ ಪ್ರಕ್ರಿಯೆ ನೋಡಲು 23 ದೇಶದ ಪ್ರತಿನಿಧಿಗಳು ಈಗಾಗಲೇ ಕರೆಸಲಾಗಿದೆ.
ಭೂತಾನ್, ಮಂಗೋಲಿಯಾ, ಆಸ್ಟ್ರೇಲಿಯಾ, ಮಡಗಾಸ್ಕರ್, ಫಿಜಿ, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ಮೊಲ್ಡೊವಾ, ಟುನೀಶಿಯಾ, ಸೆಶೆಲ್ಸ್, ಕಾಂಬೋಡಿಯಾ, ನೇಪಾಳ ಸೇರಿದಂತೆ 23 ದೇಶಗಳ ವಿವಿಧ ಚುನಾವಣಾ ನಿರ್ವಹಣಾ ಸಂಸ್ಥೆಗಳು ಮತ್ತು ಸಂಸ್ಥೆಗಳನ್ನು ಪ್ರತಿನಿಧಿಸುವ 75 ಪ್ರತಿನಿಧಿಗಳು ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.
ಫಿಲಿಪೀನ್ಸ್, ಶ್ರೀಲಂಕಾ, ಜಿಂಬಾಬ್ವೆ, ಬಾಂಗ್ಲಾದೇಶ, ಕಝಾಕಿಸ್ತಾನ್, ಜಾರ್ಜಿಯಾ, ಚಿಲಿ, ಉಜ್ಬೇಕಿಸ್ತಾನ್, ಮಾಲ್ಡೀವ್ಸ್, ಪಪುವಾ ನ್ಯೂಗಿನಿಯಾ ಮತ್ತು ನಮೀಬಿಯಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.