News Karnataka Kannada
Tuesday, April 30 2024
ಬೀದರ್

ರೈತರೊಂದಿಗೆ ಎಳ್ಳಅಮಾವಾಸ್ಯೆ ಆಚರಿಸಿದ ಶಾಸಕ ಪ್ರಭು‌ ಚವ್ಹಾಣ

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ರೈತರ ಹಬ್ಬವಾದ ಎಳ್ಳ ಅಮಾವಾಸ್ಯೆಯನ್ನು ಗುರುವಾರ ರೈತರೊಂದಿಗೆ‌ ಸಂಭ್ರಮದಿಂದ ಆಚರಿಸಿದರು.
Photo Credit : News Kannada

ಔರಾದ್: ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ರೈತರ ಹಬ್ಬವಾದ ಎಳ್ಳ ಅಮಾವಾಸ್ಯೆಯನ್ನು ಗುರುವಾರ ರೈತರೊಂದಿಗೆ‌ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ತಮ್ಮ ಗ್ರಾಮದಲ್ಲಿನ ಕೃಷಿ ಜಮೀನಿಗೆ‌ ತೆರಳಿ, ಭೂತಾಯಿಗೆ ಪೂಜೆ‌ ನೆರವೇರಿಸಿ, ಚರಗ ಚಲ್ಲುವ ಮೂಲಕ ನಮನ ಸಲ್ಲಿಸಿದರು.‌ ರೈತರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿ, ಮುಂದಿನ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ಭೂತಾಯಿ ಸಂಪನ್ನವಾಗಿರಲಿ, ರೈತರ‌ ಬದುಕು ಸಂತೋಷದಿಂದ ಕೂಡಿರಲೆಂದು ಪ್ರಾರ್ಥನೆ‌ ಸಲ್ಲಿಸಿದರು.

ಇದೇ ವೇಳೆ‌ ಶಾಸಕರು ಹೊಲದಲ್ಲಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಉಯ್ಯಾಲೆಯಾಡಿ ಖುಷಿ ಪಟ್ಟರು. ಬಳಿಕ ಮನೆಯಿಂದ ಸಿದ್ಧಪಡಿಸಿಕೊಂಡು ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಸೇವಿಸಿದರು.

ಇದೇ ವೇಳೆ‌ ಶಾಸಕರು ಹೊಲದಲ್ಲಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಉಯ್ಯಾಲೆಯಾಡಿ ಖುಷಿ ಪಟ್ಟರು. ಬಳಿಕ ಮನೆಯಿಂದ ಸಿದ್ಧಪಡಿಸಿಕೊಂಡು ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಸೇವಿಸಿದರು.

ಬಳಿಕ ಔರಾದನ ಪ್ರಕಾಶ ಅಲ್ಮಾಜೆ, ವನಮಾರಪಳ್ಳಿಯ ನಾಗನಾಥ ಮೋರ್ಗೆ, ಚಿಂತಾಕಿಯ ಈರಾರೆಡ್ಡಿ, ಉಜನಿಯ ಶಿವಾಜಿರಾವ ಪಾಟೀಲ್, ವಡಗಾಂವನ ಮಲ್ಲಪ್ಪ ಸಾವಲೆ, ಪ್ರಕಾಶ ಜೀರ್ಗೆ, ನಾಗೂರ ಗ್ರಾಮದ ಗಂಗಾರೆಡ್ಡಿಯವರ ಕೃಷಿ ಜಮೀನು ಸೇರಿದಂತೆ ಚಿಂತಾಕಿ, ಉಜನಿ, ವಡಗಾಂವ, ನಾಗೂರ(ಬಿ), ಹಾಲಹಳ್ಳಿ, ಚಾಂದೋರಿ ಗ್ರಾಮಗಳಲ್ಲಿನ ರೈತ ಮುಖಂಡರು‌ ಹಾಗೂ ಕಾರ್ಯಕರ್ತರ ಹೊಲಗಳಿಗೆ ತೆರಳಿ ಎಳ್ಳ ಅಮವಾಸ್ಯೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಬಳಿಕ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಎಳ್ಳ ಅಮಾವಾಸ್ಯೆಯ ದಿನ ರೈತರು ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಸಂಪ್ರದಾಯ. ಈ ಹಬ್ಬವನ್ನು ಪ್ರತಿ ವರ್ಷ ರೈತರೊಂದಿಗೆ ಆಚರಿಸುತ್ತೇನೆ. ಭೂತಾಯಿಯನ್ನು ಪೂಜಿಸಿ ರೈತರ ಒಳಿತಿಗಾಗಿ ಬೇಡಿಕೊಳ್ಳುತ್ತೇನೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ನಾನು ಶಾಸಕನಾದ ನಂತರ 2008ರಿಂದ ಕ್ಷೇತ್ರದಲ್ಲಿ ರೈತಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ಮತ್ತಿತರೆ ಇಲಾಖೆಗಳಿಂದ ರೈತರಿಗಾಗಿ ಇರುವ ಎಲ್ಲ ಯೋಜನೆಗಳು ಅರ್ಹರಿಗೆ ತಲುಪುತ್ತಿವೆ. ರೈತರು ಸದುಪಯೋಗ ಪಡೆಯುತ್ತಿದ್ದಾರೆ. ಪ್ರಸಕ್ತ ಹಂಗಾಮಿನ ಕೃಷಿ ಬೆಳೆಗಳು ಸರಿಯಾಗಿ ಇರುವುದರಿಂದ ಸಂತೋಷವಾಗಿದೆ. ಉತ್ತಮ ಇಳುವರಿಯಾಗಿ ರೈತರಿಗೆ ಲಾಭವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ರಮೇಶ ಬಿರಾದಾರ, ಪ್ರಕಾಶ ಅಲ್ಮಾಜೆ, ಶಿವರಾಜ ಅಲ್ಮಾಜೆ, ರವೀಂದ್ರ ರೆಡ್ಡಿ, ಖಂಡೋಬಾ ಕಂಗಟೆ, ನಾಗನಾಥ ಮೋರ್ಗೆ, ವೀರಾರೆಡ್ಡಿ, ಮಾರುತಿ ರೆಡ್ಡಿ, ಜಗದೀಶ ಪಾಟೀಲ್, ಶಿವಾಜಿರಾವ ಪಾಟೀಲ, ಸಂಜು ರೆಡ್ಡಿ, ಪ್ರಕಾಶ ಮೇತ್ರೆ, ಪ್ರಕಾಶ ಜೀರ್ಗೆ, ಪ್ರಕಾಶ ಬೀರಕೂಳೆ ಸೇರಿದಂತೆ ಇತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು