ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್ ಮದುವೆಗೆ ಸಿದ್ಧತೆಗಳು ನಡೆದಿರುವ ಮಧ್ಯೆಯೇ ಆಹ್ವಾನಿತರಿಗೆ ಮೊಬೈಲ್ ನಿಷೇಧಿಸಲಾಗಿದೆ.
ಹೌದು, ಹೆಣ್ಣು ನೋಡುವ ಶಾಸ್ತ್ರ ಸೇರಿದಂತೆ ಸಂಪ್ರದಾಯಬದ್ಧವಾಗಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಆಗುತ್ತಿದ್ದಾರೆ.ಆದರೆ ಇದುವರೆಗೂ ಮದುವೆ ದಿನಾಂಕ ಹಾಗೂ ಆಹ್ವಾನ ಪತ್ರಿಕೆ ನೀಡುವ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಆದರೆ ಮೂಲಗಳ ಪ್ರಕಾರ ರಾಜಸ್ಥಾನದ ಐಷಾರಾಮಿ ಕೋಟೆಯಲ್ಲಿ ಕತ್ರಿನಾ- ವಿಕ್ಕಿ ಮದುವೆ ಸಮಾರಂಭ ನಡೆಯಲಿದೆ. ಆದರೆ ಮದುವೆ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವ ಏಜೆನ್ಸಿ, ಅತಿಥಿಗಳು ಮೊಬೈಲ್ ಒಳಗೆ ತಾರದಂತೆ ನಿರ್ಬಂಧ ವಿಧಿಸಲಿವೆ.
ಮದುವೆ ಸಮಾರಂಭದಲ್ಲಿ ಮೊಬೈಲ್ ತಂದರೆ ಸಂಬಂಧಪಟ್ಟವರ ಗಮನಕ್ಕೆ ಬಾರದೇ ಮದುವೆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭದ ಫೋಟೊಗಳು ಸೊರಿಕೆ ಆಗದೇ ಇರಲು ಈ ನಿರ್ಧರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.