News Karnataka Kannada
Sunday, April 28 2024
ಮನರಂಜನೆ

ಉದ್ಯಮಿ ರಾಜ್‌ ಕುಂದ್ರಾ ವಿರುದ್ದ ಉದ್ಯೋಗಿಗಳೇ ಸಾಕ್ಷಿಗಳು

Raj Kundra 26 7 21
Photo Credit :

 

ನವದೆಹಲಿ, – ನೀಲಿ ಚಿತ್ರಗಳ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತ್ನಿಗೆ ರಾಜ್ ಕುಂದ್ರಾಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ.
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ ಕುಂದ್ರಾ ವಿರುದ್ಧ ಪ್ರಮುಖ ಸಾಕ್ಷಿಗಳಾಗಿ ತಮ್ಮ ಕಂಪನಿಯ ನಾಲ್ಕು ಉದ್ಯೋಗಿಗಳು ಈಗ ಮುಂದೆ ಬಂದಿದ್ದಾರೆ.
ನಾಲ್ವರು ಸಾಕ್ಷಿಗಳ ಹೇಳಿಕೆಯನ್ನು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.ಇನ್ನು, ಮುಂಬೈ ಪೊಲೀಸ್ ಅಪರಾಧ ವಿಭಾಗದ ಪೊಲೀಸರು, ಅಂಧೇರಿ ಪಶ್ಚಿಮದಲ್ಲಿರುವ ರಾಜ್ ಕುಂದ್ರ ಅವರ ವಯಾನ್ ಕಚೇರಿಯಲ್ಲಿ ಮತ್ತೊಂದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮತ್ತೊಂದೆಡೆ ವಿದೇಶೀ ವಿನಿಮಯ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಜ್ ಕುಂದ್ರಾ ವಿರುದ್ಧ ಕೇಸ್ ದಾಖಲಿಸುವುದು ನಿಚ್ಚಳವಾಗಿದೆ. ತನಿಖೆಯ ವೇಳೆ ಹಣಕಾಸಿನ ವಿಚಾರವಾಗಿ ಹಲವು ಅಕ್ರಮಗಳು ನಡೆದಿರುವುದು ಪೊಲೀಸರಿಗೆ ತಿಳಿದುಬಂದಿದೆ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು