ಡ್ರಗ್ಸ್ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಅರೆಸ್ಟ್ ಆಗುತ್ತಿದ್ದಂತೆಯೇ ಸ್ಪೇನ್ ತೆರಳುತ್ತಿದ್ದ ನಟ ಶಾರುಖ್ ಖಾನ್ ಅರ್ಧ ದಾರಿಯಿಂದಲೇ ವಾಪಸ್ಸಾಗಿದ್ದಾರೆ.
ಮಗನನ್ನು ಎನ್ಸಿಬಿ ಅವರು ವಶಕ್ಕೆ ಪಡೆಯುತ್ತಿದ್ದಂತೆ ಶಾರುಖ್ ಖಾನ್ಗೆ ಟೆನ್ಷನ್ ಶುರುವಾಗಿದೆ. ಶಾರುಖ್ ‘ಪಠಾಣ್’ ಸಿನಿಮಾದ ಹಾಡಿನ ಶೂಟಿಂಗ್ಗೆ ಸ್ಪೇನ್ಗೆ ತೆರಳಬೇಕಿತ್ತು. ಆದರೆ, ಮಗನ ಭವಿಷ್ಯದ ದೃಷ್ಟಿಯಿಂದ ಸ್ಪೇನ್ ಪ್ರವಾಸವನ್ನು ರದ್ದು ಮಾಡಿದ್ದಾರೆ.
ಶಾರುಖ್ ಮುಂಬೈನಲ್ಲಿ ಇದ್ದರೆ ಅವರೇ ಮುಂದೆನಿಂತು ಎಲ್ಲವನ್ನೂ ನೋಡಿಕೊಳ್ಳಬಹುದು. ಒಂದೊಮ್ಮೆ ಸ್ಪೇನ್ಗೆ ತೆರಳಿದರೆ ಅಲ್ಲಿಂದ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಇನ್ನು, ಆರ್ಯನ್ ವಿರುದ್ಧ ಡ್ರಗ್ ಕೇಸ್ ಬೀಳದಂತೆ ನೋಡಿಕೊಳ್ಳುವುದು ಶಾರುಖ್ಗೆ ತುಂಬಾನೇ ಮುಖ್ಯ. ಈ ಎಲ್ಲಾ ಕಾರಣದಿಂದ ಶಾರುಖ್ ಮುಂಬೈನಲ್ಲೇ ಇದ್ದು, ಮಗನನ್ನು ಈ ಪ್ರಕರಣದಿಂದ ಹೊರ ತರಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.