ನಟ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ನಟನೆಯ ‘ಆದಿಪುರುಷ್‘ ಚಿತ್ರ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಪವಿತ್ರ ಗ್ರಂಥ ‘ರಾಮಾಯಣ’ದ ಕತೆಯನ್ನು ಓಂ ರಾವುತ್ ಅವರು 500 ಕೋಟಿ ರೂಪಾಯಿ ಬಜೆಟ್ನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸನ್ನಿ ಸಿಂಗ್ ಅವರು ಈ ಚಿತ್ರದಲ್ಲಿ ಲಕ್ಷ್ಮಣ ಆಗಿ, ರಾಮನಾಗಿ ಪ್ರಭಾಸ್, ಸೀತೆ ಆಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.
ರಾಮ್ ಚರಣ್ ತೇಜ, ರಣಬೀರ್ ಕಪೂರ್, ಅಭಿಷೇಕ್ ಅಗರ್ವಾಲ್ ಸೇರಿದಂತೆ ಕೆಲವರು 10 ಸಾವಿರ ಟಿಕೆಟ್ಗಳನ್ನು ಅಸಹಾಯಕರಿಗೆ ನೀಡುತ್ತೇವೆ ಎಂದು ಹೇಳಿದ್ದರು. ರಾಮಾಯಣದ ಕಥೆ ಮಕ್ಕಳಿಗೆ ತಲುಪಬೇಕು ಎಂದು ಕೆಲವರು ಸ್ವಯಂ ಈ ಟಿಕೆಟ್ಗಳನ್ನು ಖರೀದಿ ಮಾಡಿ ನೀಡುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸಿನಿಮಾಗೆ ಭರ್ಜರಿ ಶೋಗಳು ಸಿಕ್ಕಿದೆ. ʼಆದಿಪುರುಷ್’ ತೆಲುಗು ಆವೃತ್ತಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸಿನಿಮಾದ ತೆಲುಗು ವರ್ಷನ್ಗೆ ಸುಮಾರು 400ಕ್ಕೂ (2ಡಿ+3ಡಿ) ಅಧಿಕ ಶೋಗಳು ಸಿಕ್ಕಿದ್ದು, ಕನ್ನಡ ವರ್ಷನ್ಗೆ 25+ ಶೋಗಳು ಮಾತ್ರ ದೊರೆತಿವೆ. ಹಿಂದಿ ವರ್ಷನ್ಗೆ ಕನ್ನಡಕ್ಕಿಂತ ಅಧಿಕ, 50+ ಶೋ ಸಿಕ್ಕಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್ಗೆ ಜಾಸ್ತಿ ಶೋ ನೀಡಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.
ʼಆದಿಪುರುಷ್’ ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಪಡೆದುಕೊಂಡಿದ್ದಾರೆ.