ಬೆಂಗಳೂರು: ಜೂನ್ 16ರಂದು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗಾಗಿ ಆದಿಪುರುಷ್ ಸಿನಿಮಾದ ಕನ್ನಡ ವರ್ಷನ್ನ ಪ್ರೀಮಿಯರ್ ಶೋ ನಡೆಸುತ್ತೇವೆ. ಅದು ಬಹಳ ದೊಡ್ಡ ಇವೆಂಟ್ ಆಗಿರಲಿದೆ ಎಂದು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಗೌಡ ಅವರು ಟ್ವೀಟ್ ತಿಳಿಸಿದ್ದಾರೆ.
ಸೆಲೆಬ್ರಿಟಿ ಶೋ ನಡೆದರೆ ‘ಆದಿಪುರುಷ್’ ಚಿತ್ರಕ್ಕೆ ದೊಡ್ಡ ಬೆಂಬಲ ಸಿಕ್ಕಂತೆ ಆಗುತ್ತದೆ. ‘ಕೆಜಿಎಫ್ ಸ್ಟುಡಿಯೋಸ್’ ಜೊತೆ ಅನೇಕ ನಟ-ನಟಿಯರು, ನಿರ್ದೇಶಕರು ನಂಟು ಹೊಂದಿದ್ದಾರೆ. ರಮ್ಯಾ, ಡಾಲಿ ಧನಂಜಯ್, ಯಶ್, ರಾಧಿಕಾ ಪಂಡಿತ್, ಜಗ್ಗೇಶ್, ಸಂತೋಷ್ ಆನಂದ್ರಾಮ್, ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಯುವ ರಾಜ್ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಪ್ರೀಮಿಯರ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಈಗಾಗಲೇ ‘ಆದಿಪುರುಷ್’ ಚಿತ್ರದ ಬುಕ್ಕಿಂಗ್ ಓಪನ್ ಆಗಿದೆ. ಮೊದಲ ದಿನ ಕರ್ನಾಟಕದಲ್ಲಿ ಹಾಗೂ ವಿಶ್ವಾದ್ಯಂತ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾಗೆ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಮತ್ತು ಕೃತಿ ಸನೋನ್ ಅವರು ರಾಮ-ಸೀತೆಯ ಪಾತ್ರ ಮಾಡಿದ್ದಾರೆ.
We will have a celebrity premiere for kannada version of #Adipurush on 16th of June. It will be @KRG_Studios mega event. More details soon.
— Karthik Gowda (@Karthik1423) June 12, 2023