ಬಾಲಿವುಡ್ ನಟಿ ಝರೀನ ಖಾನ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ವಂಚನೆ ಕೇಸ್ ಜೊತೆ ಲಿಂಕ್ ಹೊಂದಿರುವ ನಿಟ್ಟಿನಲ್ಲಿ ಬಾಲಿವುಡ್ನ ಖ್ಯಾತ ನಟಿಯ ವಿರುದ್ಧ ಕೊಲ್ಕತ್ತಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಈ ಕೇಸ್ 2018ರದ್ದು. 2018ರಲ್ಲಿ ದಾಖಲಾದ ಈ ವಂಚನೆ ಕೇಸ್ ಜೊತೆಗೆ ಬಾಲಿವುಡ್ ನಟಿಗೆ ಲಿಂಕ್ ಇರುವುದು ಈಗ ಬಯಲಾಗಿದ್ದು ಅವರನ್ನು ಬಂಧಿಸುವಂತೆ ಕೊಲ್ಕತ್ತಾ ಕೋರ್ಟ್ ವಾರೆಂಟ್ ಜಾರಿ ಮಾಡಿದೆ.
ಈ ಕೇಸ್ನ ತನಿಖಾ ಅಧಿಕಾರಿ ಕೊಲ್ಕತ್ತಾದ ಸೇಲ್ದಾ ಕೋರ್ಟ್ನಲ್ಲಿ ನಟಿ ಝರೀನ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು ಇದರಿಂದ ನಟಿಗೆ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧ 2018ರಲ್ಲಿಯೇ ಕೇಸ್ ದಾಖಲಾಗಿತ್ತು.
ನಟಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಈ ಬಗ್ಗೆ ತನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾನ ನನ್ನ ಲಾಯರ್ ಜೊತೆ ಮಾತನಾಡುತ್ತಿದ್ದೇನೆ. ಇದನ್ನು ತಿಳಿದ ಮೇಲಷ್ಟೇ ನಾನು ಕ್ಲಾರಿಟಿ ಕೊಡಲು ಸಾಧ್ಯ ಎಂದಿದ್ದಾರೆ ನಟಿ.