ಇದೇ ಆಗಸ್ಟ್ 11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ಚಿತ್ರತಂಡಕ್ಕೀಗ ಸಂಕಷ್ಟ ಎದುರಾಗಿದೆ. ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು ಕೊಡಲು ನಿರಾಕರಿಸಿದೆ. ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿದೆ.
ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಲಾಗಿದೆಯಂತೆ. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿನಿಮಾವನ್ನು ಪರಿಶೀಲನಾ ಸಮಿತಿಗೆ ರವಾನಿಸಲಾಗಿದ್ದು, ಸಮಿತಿಯ ನಿರ್ಣಯದ ಮೇಲೆ ಸಿನಿಮಾದ ಭವಿಷ್ಯ ನಿಂತಿದೆ.ಆದರೆ, ಈ ಹಿಂದೆ ರಿಲೀಸ್ ಆಗಿರುವ ಟೀಸರ್ ಗೆ ಸೆನ್ಸಾರ್ ಪತ್ರ ಸಿಕ್ಕಿದೆ.
ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದಾರೆ.