ಸೆಪ್ಟೆಂಬರ್ 1ರಂದು ರಿಲೀಸ್ ಆದ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಯಶಸ್ಸು ಕಂಡಿದೆ. ಈಗ ಚಿತ್ರ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್ ಆಗೋಕೆ ರೆಡಿ ಆಗಿದೆ. ಅದಕ್ಕೂ ಮೊದಲು ಚಿತ್ರವನ್ನು ನೋಡಿ ಸಮಂತಾ ಮರುಳಾಗಿದ್ದಾರೆ.
ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ‘ಮಾಸ್ಟರ್ಪೀಸ್’ ಎಂದು ಕರೆದಿದ್ದಾರೆ. ‘ನೋಡಲೇಬೇಕಾದ ಸಿನಿಮಾ. ರಕ್ಷಿತ್ ಶೆಟ್ಟಿ, ರುಕ್ಮಣಿ ವಸಂತ್ ಹಾಗೂ ಹೇಮಂತ್ ರಾವ್ ತಂಡಕ್ಕೆ ಶುಭಾಶಯ’ ಎಂದಿದ್ದಾರೆ ಸಮಂತಾ.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಕೂಡ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಮಂತಾ ಅವರಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿರುವುದರಿಂದ ತಂಡ ಖುಷಿಪಟ್ಟಿದೆ.