News Karnataka Kannada
Monday, April 29 2024
ದೆಹಲಿ

ದೇಶಕ್ಕೆ ದಿಕ್ಕು ತೋರಿದ ನಾಯಕ ಮನಮೋಹನ್‌ ಸಿಂಗ್‌ ಎಂದ ಪ್ರಧಾನಿ ಮೋದಿ

Who wants Congress' 'money heist' fairy tale: PM Modi
Photo Credit : IANS

ನವದೆಹಲಿ: ಸಂಸತ್ತಿನಲ್ಲಿ ಜವಾಹರಲಾಲ್ ನೆಹರು ಅವರ ಐತಿಹಾಸಿಕ ‘ಎ ಟ್ರೈಸ್ಟ್ ವಿತ್ ಡೆಸ್ಟಿನಿ’ ಭಾಷಣದ ಪ್ರತಿಧ್ವನಿಯು ದೇಶದ ರಾಜಕಾರಣಿಗಳಿಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಳೆಯ ಸಂಸತ್‌ ಭವನದ ಬಗ್ಗೆ ಮಾಡಿದ ವಿದಾಯದ ಭಾಷಣ ವೇಳೆ ಈ ಮೇಲಿನ ವಾಕ್ಯಗಳನ್ನು ನೆನಪಿಸಿಕೊಂಡರು.

ಆಗಸ್ಟ್ 15, 1947 ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ದೇಶದ ಮೊದಲ ಪ್ರಧಾನಿ ನೆಹರು, “ಮಧ್ಯರಾತ್ರಿಯ ಹೊತ್ತಿನಲ್ಲಿ ಜಗತ್ತು ನಿದ್ರಿಸುತ್ತಿರುವಾಗ ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಂಡಿದೆ ಎಂದು ಹೇಳಿದ್ದರು. “ನೆಹರೂ ಜೀ ಅವರ ಮಿಡ್ನೈಟ್ ಭಾಷಣದ ಪ್ರತಿಧ್ವನಿಯು ನಮಗೆ ಸ್ಫೂರ್ತಿ ನೀಡುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಈ ದೇಶ ಉಳಿಯುತ್ತದೆ ಎಂದು ಹೇಳಿದ ಸದನವೂ ಇದೆ ಎಂದರು.

ಸಂಸತ್ತು ಇಂದು ಐದು ದಿನಗಳ ವಿಶೇಷ ಅಧಿವೇಶನಕ್ಕಾಗಿ ಸಭೆ ಸೇರಿದ್ದು, ಇಂದು ಹಳೆ ಸಂಸತ್ತಿನಲ್ಲಿ ಕೊನೆಯ ಅಧಿವೇಶನ ನಡೆಯಲಿದ್ದು, ನಾಳೆಯಿಂದ ಹೊಸ ಕಟ್ಟಡದಲ್ಲಿ ಅಧಿವೇಶನಗಳು ನಡೆಯಲಿದೆ.

ಮಾಜಿ ರಾಷ್ಟ್ರಪತಿಗಳು ಮತ್ತು ಮಾಜಿ ಪ್ರಧಾನಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಬಾಬು ರಾಜೇಂದ್ರ ಪ್ರಸಾದ್‌ ಅವರಿಂದ ಹಿಡಿದು ರಾಮನಾಥ್ ಕೋವಿಂದ್‌, ದ್ರೌಪದಿ ಮುರ್ಮುವರೆಗೆ ಈ ಸಂಸತ್ತು ರಾಷ್ಟ್ರಪತಿಗಳ ಸಮರ್ಥ ಮಾರ್ಗದರ್ಶನವನ್ನು ಪಡೆದಿದೆ. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅಟಲ್ ಬಿಹಾರಿಯವರ ಕಾಲಕ್ಕೂ ಈ ಸಂಸತ್ತು ಸಾಕ್ಷಿಯಾಗಿದೆ. ಈ ದೇಶಕ್ಕೆ ದಿಕ್ಕು ತೋರಿದ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತದ ಹೆಮ್ಮೆಯಾಗಿ ಈ ಕಟ್ಟಡವಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು