ಲೋರಿಯಲ್ ಪ್ಯಾರಿಸ್ ಆಯೋಜಿಸಿದ್ದ ಪ್ಯಾರೀಸ್ ಫ್ಯಾಷನ್ ವೀಕ್ ನಲ್ಲಿ ನಟಿ ಐಶ್ವರ್ಯ ರೈ ವೈಟ್ ಗೌನ್ ನಲ್ಲಿ ಮಿಂಚಿದ್ದಾರೆ.
ನಟಿ ಐಶ್ವರ್ಯ ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್ ನ ರಾಯಭಾರಿಯಾಗಿದ್ದು, ಸಖತ್ ಸ್ಟನ್ನಿಂಗ್ ಲುಕ್ ನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಈ ವೇಳೆ ಬ್ರಿಟಿಷ್ ನಟಿ ಹೆಲೆನ್ ಮಿರನ್, ಕ್ಯಾಮಿಲಾ ಕಾಬೆಲೋ ಕೂಡ ಭಾಗಿಯಾಗಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ಪ್ಯಾರೀಸ್ ವೀಕ್ ನಲ್ಲಿ ವಿಶ್ವದ ಹಲವಾರು ತಾರೆಯರು ಭಾಗಿಯಾಗಿದ್ದು, ಭಾರತೀಯ ನಟಿ ಫ್ರಂಟ್ ಲುಕ್ ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.