ಮುಂಬೈ: ಬಾಲಿವುಡ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ಟೈಗರ್-3 ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಕೆಂಪು ಬಣ್ಣದ ಉದ್ದ ದಾಡಿ ಮತ್ತು ಉದ್ದ ಕೂದಲು ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಓಡಾಡಿದ್ದಾರೆ.
ಈ ನ್ಯೂ ಲುಕ್ನಲ್ಲಿ ಸಲ್ಮಾನ್ ಖಾನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅವರ ಗುರುತೆ ಸಿಗದಂತೆ ಬದಲಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಸಲ್ಮಾನ್ ಕಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.