Bengaluru 26°C
Ad

ರೇಣುಕಾಸ್ವಾಮಿ ಹತ್ಯೆ ಕೇಸ್: ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪೊಲೀಸರ ತನಿಖೆ ತೀವ್ರವಾಗಿದೆ. ಪರಿಚಯಸ್ಥ ಪೊಲೀಸ್ ಅಧಿಕಾರಿಗಳನ್ನು ಕಾಣುತ್ತಿದ್ದಂತೆ, ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದು ದರ್ಶನ್  ಅಲವತ್ತುಕೊಂಡಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪೊಲೀಸರ ತನಿಖೆ ತೀವ್ರವಾಗಿದೆ. ಪರಿಚಯಸ್ಥ ಪೊಲೀಸ್ ಅಧಿಕಾರಿಗಳನ್ನು ಕಾಣುತ್ತಿದ್ದಂತೆ, ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದು ದರ್ಶನ್  ಅಲವತ್ತುಕೊಂಡಿದ್ದಾರೆ.

ಸಾರ್ ನಾನು ತಪ್ಪು ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಕೇಸಲ್ಲಿ ಸಿಕ್ಕಿಬಿಟ್ಟೆ. ಸ್ನೇಹಿತರನ್ನು ನಂಬಿ ನಾನು ಹಾಳಾದೆ. ನನ್ನ ಜೀವನದಲ್ಲಿ ಇದೊಂದು ಕಪ್ಪುಚುಕ್ಕಿ ಎಂದು ಪೊಲೀಸರ ಬಳಿ ದರ್ಶನ್ ಪಶ್ಚಾತ್ತಾಪಪಟ್ಟಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ನಾಳೆ ಮೈಸೂರಲ್ಲೂ ಸ್ಥಳ ಮಹಜರು: ಇನ್ನೂ ಬೆಂಗಳೂರಿನಲ್ಲಿ ತನಿಖೆ ಮುಗಿಸಿರೋ ಪೊಲೀಸರು ಮಂಗಳವಾರ ಮೈಸೂರಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.

ದರ್ಶನ್ ಉಳಿದುಕೊಂಡಿದ್ದ ಹೋಟೆಲ್, ಅರೆಸ್ಟ್ ಆಗೋ ಮುನ್ನ ದರ್ಶನ್ ಹೋಗಿದ್ದ ಜಿಮ್ ಹಾಗೂ ಹೋಟೆಲ್ ಮುಂಭಾಗ ಇರೋ ಕಾರಿನ ಮಹಜರು ನಡೆಸಲಿದ್ದಾರೆ. ಹತ್ಯೆ ಬಳಿಕ ಮೈಸೂರಿಗೆ ಹೋಗಲು ಬಳಸಿದ್ದ ಐಷಾರಾಮಿ ಕಾರನ್ನೂ ಪೊಲೀಸರು ವಶಕ್ಕೆ ಪಡೆಯೋ ಸಾಧ್ಯತೆಗಳಿವೆ. ಒಟ್ಟಿನಲ್ಲಿ ದರ್ಶನ್ ಕೇಸಲ್ಲಿ ಪೊಲೀಸರು ಶರವೇಗದಲ್ಲಿ ತನಿಖೆ ನಡೆಸುತ್ತಿದ್ದು, ಇನ್ನೇನು ಪ್ರಕರಣದ ತನಿಖೆ ಕೊನೆ ಹಂತಕ್ಕೆ ಬಂದಿದೆ.

Ad
Ad
Nk Channel Final 21 09 2023
Ad