Ad

ಮಂಗಳೂರು ಹಾಸ್ಟೆಲ್‌ ಸಿಗದಿದ್ದರೂ ಛಲ ಬಿಡದ ತಾಯಿ, ಮಗಳು

: ಮಗಳಿಗೆ ಮಂಗಳೂರಿನ ಕಾಲೇಜಿನಲ್ಲಿ ಓದುವ ಆಸೆ , ಮಗಳ ಆಸೆಗೆ ತಾಯಿಯ ಪೂರಕ ಸ್ಪಂದನೆ ಕೂಡ ಇದೆ. ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತ್ತಾದರೂ ಹಾಸ್ಟೆಲ್‌ ಸೀಟ್‌ ಸಿಗಲಿಲ್ಲ ಆದರೆ ಮೊದಲಿಗೆ ನಿರಾಸೆಯಾಯಿತ್ತಾರೂ ಛಲ ಬಿಡದ ತಾಯಿ

ಮಂಗಳೂರು: ಮಗಳಿಗೆ ಮಂಗಳೂರಿನ ಕಾಲೇಜಿನಲ್ಲಿ ಓದುವ ಆಸೆ , ಮಗಳ ಆಸೆಗೆ ತಾಯಿಯ ಪೂರಕ ಸ್ಪಂದನೆ ಕೂಡ ಇದೆ. ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತ್ತಾದರೂ ಹಾಸ್ಟೆಲ್‌ ಸೀಟ್‌ ಸಿಗಲಿಲ್ಲ ಆದರೆ ಮೊದಲಿಗೆ ನಿರಾಸೆಯಾಯಿತ್ತಾರೂ ಛಲ ಬಿಡದ ತಾಯಿ, ಮಗಳು ಪ್ರತಿ ದಿನ ಕಾಲೇಜಿಗೆ 160 ಕಿ.ಮೀ ದೂರದಿಂದ ಕ್ರಮಿಸುತ್ತಾರೆ. ಮಗಳ ತರಗತಿ ಮುಗಿಯುವ ವರೆಗೂ ವೆನ್‌ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಕುಳಿತು ಕಾಲ ಕಳೆಯುತ್ತಾರೆ.

Ad
300x250 2

ಪುತ್ರಿ ಪಿಯುಸಿಗೆ ಬಲ್ಮಠ ಕಾಲೇಜೊಂದರಲ್ಲಿ ಕಲಾ ವಿಭಾಗದಲ್ಲಿ ಸೇರಿದ್ದಾಳೆ . ಆ ಕಾಲೇಜಿನಲ್ಲಿ ಪ್ಲೇಸ್‌ಮೆಂಟ್‌ ಇರುವ ಕಾರಣ ದೂರ ದೂರದಿಂದ ವಿದ್ಯಾರ್ಥಿನಿಯರು ಇಲ್ಲಿಗೆ ಬರುತ್ತಾರೆ.

ಹಾಸ್ಟೆಲ್‌ ಸಿಕ್ಕಿಲ್ಲ,
ನಾನು ಬೀಡಿ ಕಟ್ಟುತ್ತಿದ್ದೆ. ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. ಈಗ ಮಗಳ ಜತೆ ಮಂಗಳೂರಿನ ಬಂದು ಹೋಗುತ್ತೇನೆ. ಬೀಡಿ ಕಟ್ಟಲು ಸಮಯ ಸಿಗುವುದಿಲ್ಲ. ಪತಿ ಕೂಲಿ ಕೆಲಸ ಮಾಡುತ್ತಾರೆ. ಮಗಳ ಆಸೆಯಂತೆ ನಗರದ ಕಾಲೇಜಿಗೆ ಸೇರಿಸಿದ್ದೇವೆ. ಆದರೆ ಹಾಸ್ಟೆಲ್‌ ಸಿಗದೆ ಸಮಸ್ಯೆಯಾಗಿದೆ. ಒಬ್ಬಳೇ ಬಂದು ಹೋಗುತ್ತೇವೆ ಎನ್ನುತ್ತಾಳೆ, ಆದರೆ ನನಗೆ ಮನಸ್ಸು ಒಪ್ಪುವುದಿಲ್ಲ . ಅದಕ್ಕಾಗಿ ಅವಳ ಜತೆಗೆ ನಾನು ಕೂಡ ಬರುತ್ತೇನೆ. ನಗರಕ್ಕೆ ಬಂದು ಆಕೆಯ ತರಗತಿ ಮುಗಿಯುವ ವರೆಗೆ ಆಸ್ಪತ್ರೆಯ ಆವರಣದಲ್ಲಿ ಸಮಯ ಕಳೆಯುತ್ತೇನೆ ವಿಚಾರಿಸಿದರೆ ಈಗ ಸೇರಿಸುವುದಿಲ್ಲ. ಸರ್ವರ್‌ ಸಮಸ್ಯೆ ಇದೆ.

ಸರ್ವರ್‌ ಸಮಸ್ಯೆ,
ಪರಿಶಿಷ್ಟ ಜಾತಿಯವರ ಹಾಸ್ಟಲ್‌ ಪ್ರವೇಶ ಪ್ರಕ್ರಿಯೆಗೆ ಸರ್ವರ್‌ ಸಮಸ್ಯೆ ತೊಡಕಾಗಿದೆ. ಇದು ಇಡೀ ರಾಜ್ಯದಲ್ಲಿರುವ ಸಮಸ್ಯೆ. ಈ ಬಗ್ಗೆ ಸೋಮವಾರ ಸಭೆ ನಡೆಸಲಾಗಿದ್ದು, ಆನ್‌ಲೈನ್‌ ಸಾಧ್ಯವಾಗಿದ್ದಾರೆ ಮ್ಯಾನುವಲ್‌ ಅರ್ಜಿ ಸ್ವೀಕರಿಸಿ ದಾಖಲಾತಿ ಮಾಡಿಕೊಳ್ಳಲು ಆಯುಕ್ತರಿಂದ ಸೂಚನೆ ಬಂದಿದೆ. ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ವರ್‌ ಸಮಸ್ಯೆಯೂ ಶೀಘ್ರ ಬಗೆಹರಿಯುವ ನಿರೀಕ್ಷೆ ಇದೆ.

Ad
Ad
Nk Channel Final 21 09 2023
Ad