Ad

ಜಾರ್ಖಂಡ್‌ನಲ್ಲಿ ಗುಂಡಿನ ದಾಳಿ: ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ಲ್ಲಿ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿದೆ. 

ರಾಂಚಿ: ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ಲ್ಲಿ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿದೆ.

Ad
300x250 2

ಹತ್ಯೆಗೀಡಾದವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ತೋಂಟೊ ಮತ್ತು ಗೋಯಿಲ್ಕೆರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಕೂಂಬಿಂಗ್ ಕಾರ್ಯಾಚರಣೆ ವೇಳೆ ಎನ್‍ಕೌಂಟರ್ ನಡೆದಿದೆ.

ಈ ವೇಳೆ ಅಡಗಿ ಕುಳಿತಿದ್ದ ನಕ್ಸಲರು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ನಾಲ್ವರು ನಕ್ಸಲರು ಬಲಿಯಾಗಿದ್ದಾರೆ. ಎನ್‍ಕೌಂಟರ್ ಬಳಿಕ ಇಬ್ಬರು ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಾರ್ಖಂಡ್‌ನ ಪೊಲೀಸ್ ಐಜಿ ಅಮೋಲ್ ವಿ ಹೋಮ್ಕರ್ ಅವರು, ನಿಷೇಧಿತ ಸಿಪಿಐ ಸಂಘಟನೆಯ ನಾಲ್ವರು ಎನ್‍ಕೌಂಟರ್ ವೇಳೆ ಬಲಿಯಾಗಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭದ್ರತಾ ಪಡೆಯ ಗುಂಡಿಗೆ ಬಲಿಯಾದವರು ಝೋನಲ್ ಕಮಾಂಡರ್, ಸಬ್ ಜನರಲ್ ಕಮಾಂಡರ್, ಏರಿಯಾ ಕಮಾಂಡರ್ ಮತ್ತು ಇನ್ನೊಬ್ಬರು ಮಹಿಳಾ ಸದಸ್ಯರಾಗಿದ್ದಾರೆ.  ಬಂಧಿತರು ಎನ್‍ಕೌಂಟರ್ ನಡೆದ ಪ್ರದೇಶದ ಕಮಾಂಡರ್ ಮತ್ತು ಮತ್ತೋರ್ವರು ತೀವ್ರಗಾಮಿ ಮಹಿಳಾ ನಕ್ಸಲೈಟ್ ಆಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Ad
Ad
Nk Channel Final 21 09 2023
Ad