News Karnataka Kannada
Sunday, May 05 2024
ಮೈಸೂರು

ಮೈಸೂರು: ಮಾವುತರ ಮಕ್ಕಳಿಗೆ ಎಸ್.ಡಿ.ಎಮ್.ಐ.ಎಮ್.ಡಿ ವಿದ್ಯಾರ್ಥಿಗಳಿಂದ ಚಟುವಟಿಕೆ

SDMIMD Students conduct activities for the Children of Mahout's Family
Photo Credit : By Author

ಮೈಸೂರು, ಸೆ.14: ಎಸ್ ಡಿ ಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೆಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯ ಲೈಬ್ರರಿ ಇನಿಶಿಯೇಟಿವ್ ಫಾರ್ ಎಜುಕೇಶನ್ ಕಮಿಟಿಯ ಸದಸ್ಯರು, ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ಮತ್ತು ರೋಟರಿ ಕ್ಲಬ್ (ದಕ್ಷಿಣ-ಪೂರ್ವ) – ಇವರುಗಳ ಸಹಯೋಗದೊಂದಿಗೆ ಮೈಸೂರು ದಸರಾ 2022 ಕ್ಕಾಗಿ ಆಗಮಿಸಿ, ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತರ ಕುಟುಂಬಗಳ ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ನಡೆಸಿದರು.

ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯ ಲೈಫ್ ತಂಡದ ಸದಸ್ಯರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಜೀವನದ ಕೌಶಲ್ಯಗಳ ಬಗ್ಗೆ ತಿಳುವಳಿಕೆ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಎಂಟು ವಾರಗಳಲ್ಲಿ ಹದಿನಾರು ಅವಧಿಗಳಲ್ಲಿ ಈ ಕಾರ್ಯಕ್ರಮವು ನಡೆಯಿತು.

ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯ ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆಯ ಶಿಕ್ಷಕರು ಟೆಂಟ್ ಶಾಲೆಯಲ್ಲಿ ಚಟುವಟಿಕೆಗಳನ್ನು ನಡೆಸಿಕೊಟ್ಟರು ಹಾಗೆಯೇ ತಮ್ಮ ಮಾರ್ಗದರ್ಶನವನ್ನೂ ನೀಡಿದರು. ಈ ಕಾರ್ಯಕ್ರಮಕ್ಕೆ ಅವಶ್ಯಕವಾದ ಸಾಮಗ್ರಿಗಳನ್ನು ಒದಗಿಸಿಕೊಡುವ ಮೂಲಕ, ರೋಟರಿ ಕ್ಲಬ್ (ದಕ್ಷಿಣ-ಪೂರ್ವ) ಇವರು ಸಹಕರಿಸಿದರು.

ವೇಗವಾಗಿ ಚಲಿಸುತ್ತಿರುವ ಇಂದಿನ ಪ್ರಪಂಚಕ್ಕೆ ಹೊಂದಿಕೊಳ್ಳಲು ಅವಶ್ಯವಿರುವ ತಂತ್ರಜ್ಞಾನ, ಕುಶಲತೆಗಳ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಸಿ, ಅರಿವು ಮೂಡಿಸುವ ಉದ್ದೇಶದಿಂದ ಚಟುವಟಿಕೆಗಳನ್ನು ರೂಪುಗೊಳಿಸಲಾಗಿತ್ತು. ವ್ಯಕ್ತಿ ವಿಕಸನ ಕೌಶಲ್ಯಗಳ ಬಗ್ಗೆಯೂ ಕೆಲವು ಚಟುವಟಿಕೆಗಳನ್ನು ನಡೆಸಲಾಯಿತು.

ಕಾರ್ಯಕ್ರಮದ ಮೊದಲನೆಯ ದಿನದಂದು ಸ್ವಯಂಸೇವಕರು ಮಕ್ಕಳ ಜೊತೆ ಮಾತನಾಡುವ ಮೂಲಕ ಅವರ ಸಂಸ್ಕೃತಿ ಮತ್ತು ಜೀವನಶೈಲಿಯ ಬಗ್ಗೆ ಅರಿತುಕೊಂಡರು. ಮಾವುತರ ಮಕ್ಕಳ ಅರಿವಿನ ಮಟ್ಟಕ್ಕೆ ಇಳಿದು, ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯ ವಿದ್ಯಾರ್ಥಿಗಳು ಸಮೂಹ ನಿರ್ಮಾಣ, ನಾಯಕತ್ವ ಮತ್ತು ನಿರ್ಣಾಯಕ ಆಲೋಚನೆಗೆ ಸಂಬಂಧಿಸಿದ ಚಟುವಟಿಕೆಗಳ ಮೂಲಕ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು