Showing 20 of 1954 posts • Page 70 of 98
ಅಪರ್ಣಾ ವಸ್ತಾರೆ ನೆನಪು ನುಡಿಗಳಲ್ಲಿ…ಸಾಲುಗಳಲ್ಲಿ ಬಂಧಿ ಆಗಿದೆ. ನಿರೂಪಣಾ ಜೀವನದಲ್ಲಿ, ಸಿನಿಮಾ ಜೀವನದಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡ ಅಪರ್ಣಾ, ಪತಿ ನಾಗರಾಜ್ ವಸ್ತಾರೆ ಅವರಿಗ ಪ್ರೀತಿಯ ಅಪರ್ಣೆ ಆಗಿದ್ದರು.
ನಟ ದರ್ಶನ್ ಅವರು ಜೈಲೂಟ ಚೆನ್ನಾಗಿಲ್ಲ, ಮನೆ ಊಟ ಕೊಡಿ ಎಂದು ಪದೇ ಪದೇ ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಕೋರ್ಟ್ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಕೆ ಆಗಿದೆ.
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ನೂತನ ಅಧ್ಯಕ್ಷರಾಗಿ ಪ್ರೀತಿ ಸೂದನ್ ಆಯ್ಕೆಯಾಗಿದ್ದು, ಆಗಸ್ಟ್ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಗರದ ದೇವಸ್ಥಾನಗಳಲ್ಲಿ ಮುಜುರಾಯಿ ಇಲಾಖೆ ಪೂಜೆಗಳನ್ನ ಆನ್ ಲೈನ್ ನಲ್ಲಿ ಮಾಡಿಸಲು ವ್ಯವಸ್ಥೆ ಮಾಡಿತ್ತು. ಇದರಿಂದ ಕೆಲವೇ ತಿಂಗಳಲ್ಲಿ ಹಲವು ಸಮಸ್ಯೆಗಳು ತಲೆದೂರಿದ್ದು, ಅರ್ಚಕರ ಅಸೋಸಿಯೇಷನ್ ವತಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಮೈಸೂರಿನಿಂದ ವಯನಾಡ್ಗೆ ಹೋಗಿ ಮೊಂಡಕೈ ಗ್ರಾಮದಲ್ಲಿ ವಾಸವಿದ್ದ ದೇವರಾಜ್ ಅವರ ಕುಟುಂಬದ ಇಬ್ಬರು ಸದಸ್ಯರು ರಣಭೀಕರ ಪ್ರವಾಹ ಮತ್ತು ಗುಡ್ಡ ಕುಸಿತದ ಆರ್ಭಟಕ್ಕೆ ಬಲಿಯಾಗಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರ ಆರೋಪದಡಿ ಹಾಸನದ ಪ್ರಸಿದ್ಧ ದೇವಾಲಯದ ಪೂಜಾರಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ (39) ಬಂಧಿತ ವ್ಯಕ್ತಿ.
ಕೇರಳದಲ್ಲಿ ಸಂಭವಿಸಿರುವ ಭಾರೀ ಭೂ ಕುಸಿತದಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವ ತುರ್ತು ಅಗತ್ಯವಿದೆ. ತುರ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮಾಂಸ ಸಾಗಾಟಕ್ಕೆ ಅಡಚಣೆ ಪ್ರಕರಣದಲ್ಲಿ ಬಂಧನವಾಗಿದ್ದ ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿಗೆ ನಗರದ 5ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ನಾಡಿಗೆ ಆಪತ್ತು ತಂದ ಜಲ ಕಂಟಕದ ಬಗ್ಗೆ ಕೋಡಿಮಠ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿದೆ. ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ನಾಡಿಗೆ ಕಾಡಲಿರುವ ಜಲಕಂಟಕದ ಬಗ್ಗೆ ಈ ವರ್ಷದ ಆರಂಭದಲ್ಲೆ ಭವಿಷ್ಯ ನುಡಿದಿದ್ದರು.
ಗಾಂಜಾ ಕೊಂಡುಕೊಳ್ಳಲು ಮೊಬೈಲ್ ಕದಿಯುತ್ತಿದ್ದ ಆರೋಪಿಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಅಬ್ದುಲ್ ರಜಾಕ್ (22) ಬಂಧಿತ ಆರೋಪಿ.
11 ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ, ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಲೋಕಸಭಾ ಸಚೇತಕರಾಗಿ ಆಯ್ಕೆ ಮಾಡಿ ನೇಮಕಾತಿ ಆದೇಶವನ್ನು ಬಿಜೆಪಿ ಹೊರಡಿಸಿದೆ. ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಗೆ ಕೋಟಾ ಶ್ರೀನಿವಾಸ್ ಪೂಜಾರಿ ಧನವಾದ ತಿಳಿಸಿದ್ದಾರೆ.
“ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದರೆ ವೈಯಕ್ತಿಕ ಖರ್ಚಿನಲ್ಲಿ ದ್ವಿಚಕ್ರ ವಾಹನ” ಕೊಡಿಸುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಣೆ ಮಾಡಿದ್ದಾರೆ.
ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಕೊಲ್ಲೂರಿಗೆ ತೆರಳಿದ್ದರು. ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆಯನ್ನು ಅವರು ಮಾಡಿಸಿದ್ದರು.
ಶಿರಾಡಿ ಘಾಟಿಯಲ್ಲಿ ರೈಲ್ವೇ ಹಳಿ ಮೇಲೆ ಭಾರಿ ಭೂಕುಸಿತ ಆಗಿರುವ ಪರಿಣಾಮ, ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲುಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ.
ಕೆಲಸದ ಅವಧಿಯನ್ನು ದಿನಕ್ಕೆ ಸರ್ಕಾರದ ಚಿಂತನೆಯನ್ನು ಐಟಿ ಉದ್ಯೋಗಿಗಳು ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಡೆಂಘೀ ಸೋಂಕಿನ ಅಬ್ಬರ ಮುಂದುವರೆದಿದೆ. ಭಾನುವಾರವೂ 320 ಮಂದಿಗೆ ಡೆಂಘೀ ದೃಢಪಟ್ಟಿದ್ದು ಒಟ್ಟು ಡೆಂಘೀ ಪ್ರಕರಣ 17 ಸಾವಿರ ಗಡಿ ದಾಟಿದೆ.
ಬಿಬಿಎಂಪಿಯ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೆ.ಆರ್.ಸರ್ಕಲ್ ಬಳಿ ನಡೆದಿದೆ. ಪ್ರಶಾಂತ್ (25), ಶಿಲ್ಪ ಮೃತ ದುರ್ದೈವಿಗಳು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ತಂದೆ ಪುಟ್ಟಮಾದೇಗೌಡ (89) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನರಾದರು. ನಿವೃತ್ತ ಶಿಕ್ಷಕ ಪುಟ್ಟಮಾದೇಗೌಡ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ನನ್ನ ತಂದೆ ಆರೋಗ್ಯವಾಗಿದ್ದಾರೆ. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಕೆಲಸದ ಒತ್ತಡದಿಂದ ಮೂಗಿನಲ್ಲಿ ರಕ್ತಸ್ರಾವ ಆಗಿದೆ ಎಂದು ಕೇಂದ್ರ ಸಚಿವ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.