ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ಮತ್ತು ಗ್ಯಾಂಗ್‌ಗೆ ಆ.28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಆರೋಪಿಗಳಿಗೆ 24ನೇ ಎಸಿಎಂಎಂ ನ್ಯಾಯಾಲಯದ ಇನ್‌ಚಾರ್ಜ್ ಕೋರ್ಟ್, ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ 4 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರು ಪಡಿಸಲಾಗಿತ್ತು. ಆದರೆ, ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.
ಪೊಲೀಸ್ ಅಧಿಕಾರಿಗಳು ನೀಡಿದ ಕಾರಣಗಳಿವು,
1) ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದು FSL ವರದಿಯಲ್ಲಿ ಬಹುತೇಕ ದೃಢವಾಗಿದೆ. ಈಗಾಗಲೇ ಕೆಲವು ಎಫ್ಎಸ್ಎಲ್ ವರದಿಗಳು ಬಂದಿವೆ. ಇನ್ನೂ ಕೆಲವು ವರದಿಗಳು ಬರಬೇಕಿವೆ.
2) ಪ್ರಕರಣ ಸಂಬಂಧ ಇನ್ನೂ ಹಲವರ ವಿಚಾರಣೆ ಬಾಕಿ ಇದೆ, ಸೆಕ್ಷನ್ 164 ರ ಅಡಿಯಲ್ಲಿ ಕೆಲವು ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ.
3) ಆರೋಪಿಗಳು ಪ್ರಭಾವಿಗಳಾಗಿದ್ದು ಮೃತ ರೇಣುಕಾ ಸ್ವಾಮಿಯ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಸಾಧ್ಯತೆ ಇದೆ.
4) ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳನ್ನು CFSL ಪರೀಕ್ಷೆಗೆಂದು ಕಳಿಸಿದ್ದು ಅವುಗಳ ವರದಿ ಬರುವುದು ಬಾಕಿ ಇದೆ.
5) ಪವಿತ್ರ, ದರ್ಶನ್ ನಿಂದ 17 ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿ ಆಗಿರುವುದು ಮೇಲ್ನೋಟಕ್ಕೆ ತಿಳಿದಿದೆ. ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ ಆಗಿದೆ.
6) ಕೊಲೆಯಲ್ಲಿ ಪ್ರತಿ ಆರೋಪಿಯ ಪಾತ್ರದದ ಬಗ್ಗೆ ತಿಳಿಯಬೇಕಿದೆ. ಕೃತ್ಯದಲ್ಲಿ ಪ್ರತಿಯೊಬ್ಬರು ವಹಿಸಿದ್ದ ಪಾತ್ರ, ಉದ್ದೇಶಗಳ ಬಗ್ಗೆ ಗೊತ್ತಾಗಬೇಕಿದೆ.
7) ಆರೋಪಿಗಳಿಗೆ ಹಣಬಲ ಇದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದರೆ ತೊಂದರೆ ಆಗುವ ಸಾಧ್ಯತೆ ಇದೆ. ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದೆ.

