ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ (ಕೆಎಂಎಫ್) ಉತ್ಪಾದಿಸುವ ನಂದಿನಿ ಹಾಲನ್ನು ದೆಹಲಿಗೂ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ. ಪ್ರತಿನಿತ್ಯ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ.

ಕರ್ನಾಟಕದ ನಂದಿನಿ ಹಾಲು ದೇಶದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದು, ನಮ್ಮ ರಾಜ್ಯ ಮಾತ್ರವಲ್ಲದೇ ನೆರೆ ಹೊರೆ ರಾಜ್ಯಗಳು, ದೇಶ ವಿದೇಶಗಳಲ್ಲಿಯೂ ಮಾರಾಟ ಆಗುತ್ತಿವೆ, ನಂದಿನಿ ಬ್ರ್ಯಾಂಡ್‌ನ ಟೆಟ್ರಾ ಪ್ಯಾಕ್ ಹಾಲನ್ನು ನಮ್ಮ ದೇಶದ ಸೈನಿಕರಿಗೂ ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಂದಿನಿ ಹಾಲನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ಕಳುಹಿಸುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ.