ಬೆಂಗಳೂರು: ಇನ್ನು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀಲಂಕಾದ ಕ್ರಿಕೆಟ್​ ತಂಡದ ಬ್ಯಾಟಿಂಗ್​ ಕೋಚ್ ಆಗಿ ಆತಿಥೇಯ ದೇಶ ಮಾಜಿ ಕ್ರಿಕೆಟಿಗ ಇಯಾನ್ ಬೆಲ್  ನೇಮಕಗೊಂಡಿದ್ದಾರೆ. ತಮ್ಮ ಕಾಲದ ಅತ್ಯಂತ ಸೊಗಸಾದ ಟೆಸ್ಟ್ ಬ್ಯಾಟರ್​ಗಳಲ್ಲಿ ಒಬ್ಬರಾದ ಬೆಲ್ ಆಗಸ್ಟ್ 16 ರಂದು ತಂಡದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ. ಅವರು ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮುಕ್ತಾಯದವರೆಗೂ ಇರಲಿದ್ದಾರೆ.

ಇಂಗ್ಲೆಂಡ್​​ನ ಮಾಜಿ ಬ್ಯಾಟರ್​ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 42.69 ಸರಾಸರಿಯಲ್ಲಿ 7727 ರನ್ ಗಳಿಸಿದ್ದಾರೆ. ಅವರು 22 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಶ್ರೀಲಂಕಾ ಇತ್ತೀಚೆಗೆ ಭಾರತವನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಸೋಲಿಸಿದೆ. ಮಧ್ಯಂತರ ಮುಖ್ಯ ಕೋಚ್ ಸನತ್ ಜಯಸೂರ್ಯ ಅವರ ಅಡಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸುವ ಭರವಸೆಯಲ್ಲಿದೆ.