Showing 20 of 20755 articles • Page 683 of 1038
ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇನ್ಕಮ್ ಟ್ಯಾಕ್ಸ್ ಇಲಾಖೆಯಲ್ಲಿ ಖಾಲಿ ಇರುವಂತ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಬಿಲಾಸ್ಪುರ್ ಹಾಗೂ ರುದ್ರಪುರ ನಡುವೆ ಸಂಚರಿಸುತ್ತಿದ್ದ ನೈನಿ ಜನ ಶತಾಬ್ದಿ ಎಕ್ಸ್ಪ್ರೆಸ್ಗೆ ಅಡ್ಡಲಾಗಿ ಕೆಲವು ಕಿಡಿಗೇಡಿಗಳು 6 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಹಳಿಯ ಮೇಲೆ ಇಟ್ಟಿದ್ದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇರುವಂತೆ, ದಸರಾ ಉದ್ಘಾಟಕರ ಹೆಸರು ಅಂತಿಮಗೊಳಿಸಲಾಗಿದೆ. ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಅವರು 2024ರ ದಸರಾ ಉದ್ಘಾಟನೆ ಮಾಡಲಿದ್ದಾರೆ.
ಇತ್ತೀಚೆಗಿನ ನ್ಯಾಯಾಲಯದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (ಸೆ.20) ಕರ್ನಾಟಕ ಹೈಕೋರ್ಟ್ ನಿಂದ ವರದಿ ಕೇಳಿದೆ.
ಕ್ರಿಪ್ಟೋಕರೆನ್ಸಿಯನ್ನು ಉತ್ತೇಜಿಸುವ ಭಾರತದ ಸುಪ್ರೀಂ ಕೋರ್ಟ್ ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಿಸ್ಟರ್/ಮಿಸ್/ಟೀನ್/ಮಿಸ್ಟ್ರೆಸ್ ಕರಾವಳಿ 2024 ಸ್ಪರ್ಧೆಯನ್ನು ಸೆ. 15 ರಂದು ಮಂಗಳೂರಿನ ಎ.ಜೆ. ಗ್ರ್ಯಾಂಡ್ ಹೋಟೆಲ್ ನಲ್ಲಿ ಆಯೋಜಿಸಲಾಯಿತು.
ಡಾ ಎನ್. ಎಸ್ ಎ ಎಂ ಪದವಿಪೂರ್ವ ಕಾಲೇಜು ನಿಟ್ಟೆ ಹುಡುಗರ ವಿಭಾಗದಲ್ಲಿ ಪ್ರಥಮ ಹಾಗೂ ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ನಿಟ್ಟೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆ ಗೊಂಡಿರುತ್ತದೆ.
“ಜೀವನದಲ್ಲಿ ಮನುಷ್ಯ ತನ್ನ ವೈಫಲ್ಯಗಳಿಂದ ಪಾಠಗಳನ್ನು ಕಲಿಯಬೇಕು. ಸವಾಲುಗಳನ್ನು ಸ್ವೀಕರಿಸುವ ಮೂಲಕ ಕನಸುಗಳನ್ನು ನನಸು ಮಾಡಬಹುದು” ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಶಾಂತ್ ಶೆಣೈ ಕಟಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಿರಣ್, ನಿರ್ಕಾಣ್ ಕಾವ್ಯನಾಮದಲ್ಲಿ ಬರೆಯುತ್ತಿರುವ ಪ್ರತಿಭಾವಂತ ಯುವ ಬರಹಗಾರ ಫ್ಲೋಯ್ಡ್ ಕಿರಣ್ ಮೊರಾಸ್ 2024 ನೇ ಸಾಲಿನ ‘ಶ್ರೀ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪುರಸ್ಕಾರ’ ಕ್ಕೆ ಆಯ್ಕೆಯಾಗಿದ್ದಾರೆ.
ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು ಇಂದು ಷೇರುಮಾರುಕಟ್ಟೆ ಆರಂಭದಲ್ಲೇ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.
ಕಾರು ಚಾಲಕನೊಬ್ಬ ರಾಂಗ್ ಸೈಡ್ನಲ್ಲಿ ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ನಟಿ ಬ್ರಶ್ ಮಾಡುವುದು, ರೆಡಿಯಾಗುವುದನ್ನು ತೋರಿಸಿದ್ದಾರೆ. ಈ ವೇಳೆ ನಟಿ ಪರ್ಪಲ್ ಬಣ್ಣದ ಟೂತ್ಪೇಸ್ಟ್ ಬಳಸಿದ್ದು ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ.
ಭಾರತ ಮೂಲದ ಧ್ರುವಿ ಪಟೇಲ್ ಅವರು ಈ ವರ್ಷದ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ ನ್ಯೂಜೆರ್ಸಿಯ ಎಡಿಸನ್ನಲ್ಲಿ ನಡೆದ ಸಮಾರಂಭದಲ್ಲಿ ಧ್ರುವಿ ಪಟೇಲ್ ಅವರ ಹೆಸರು ಘೋಷಣೆ ಮಾಡಲಾಯಿತು.
ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ಆರ್ ಪಿಎಫ್ ಮಹಿಳಾ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಲೆಬನಾನ್ ನಾಗರಿಕ ವಿಮಾನಯಾನ ಪ್ರಾಧಿಕಾರವು ರಫೀಕ್ ಹರಿರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಎಲ್ಲಾ ವಿಮಾನಗಳಲ್ಲಿ ಪೇಜರ್ಗಳು ಮತ್ತು ವಾಕಿ-ಟಾಕಿಗಳನ್ನು ನಿಷೇಧಿಸಿದೆ.
ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಶಿಪಟ್ನ ಗ್ರಾಮದ ಉರ್ದುಗುಡ್ಡೆ ಎಂಬಲ್ಲಿ ಸಂಭವಿಸಿದೆ. ನೊಣಯ್ಯ ಪೂಜಾರಿ (63) ಹಾಗೂ ಅವರ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡವರು.
ಸ್ಪೀಕರ್ ಯುಟಿ ಖಾದರ್ ಅವರು ಜೀಪ್ನಲ್ಲಿ ಬಿಂದಾಸ್ ಆಗಿ ಆಫ್-ರೋಡ್ ಡ್ರೈವ್ ಮಾಡಿ ಎಲ್ಲಾರ ಗಮನಸೆಳೆದಿದ್ದಾರೆ. ಕೆಎ 19-20 ಯುನೈಟೆಡ್ ಆಫ್ರೋಡರ್ ಆಯೋಜಿಸಿರುವ ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆ ಮಂಗಳೂರಿನ
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ರಾಮನಗರ ಪೊಲೀಸರು ಶಾಸಕ ಮುನಿರತ್ನರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಡಿಶಾದ ಖ್ಯಾತ ಗಾಯಕಿ ರುಕ್ಸಾನಾ ಬಾನೊ ನಿಧನರಾಗಿದ್ದಾರೆ. ಅವರಿಗೆ 27 ವರ್ಷ ವಯಸ್ಸಾಗಿತ್ತು. ರುಕ್ಸಾನಾ ಳೆದ 15 ದಿನಗಳಿಂದ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಯುವತಿಯೊಬ್ಬಳು ಕೆಲಸಕ್ಕೆ ಸೇರಿದ ನಾಲ್ಕು ತಿಂಗಳಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಅಧಿಕ ಒತ್ತಡವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.