ಮಂಗಳೂರು: ಇಂದು ಮಂಗಳೂರು ಬಿಜೆಪಿ ಕಚೇರಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿದ್ದು, ಐವಾನ್ ಡಿ ಸೋಜ ಮನೆ ಮೇಲೆ ಕಲ್ಲೆಸೆತ ಹಿನ್ನಲೆ ಇಂದು ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲಿದ್ದಾರೆ. ಐವಾನ್ ಡಿ ಸೋಜ ಮನೆಯಿಂದ ಆರಂಭವಾಗಿ ದ. ಕ ಬಿಜೆಪಿ ಕಚೇರಿಗೆ ಪಾದಯಾತ್ರೆ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎರಡು ಕೆ ಎಸ್ ಆರ್ ಪಿ ತುಕಡಿ, 50 ಅಧಿಕ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಐವನ್ ಡಿಸೋಜ ಭೇಟಿಗಾಗಿ ನೂರಾರು ಮಂದಿ ಪಕ್ಷದ ಕಾರ್ಯಕರ್ತರು, ಜಿಲ್ಲಾ ಕಾಂಗ್ರೆಸ್ ಮುಖಂಡರು ಆಗಮಿಸುತ್ತಿದ್ದಾರೆ. ನಿನ್ನೆ ರಾತ್ರಿ ಐವನ್ ಮನೆಗೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿದ್ದಾರೆ. ಘಟನೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಐವನ್ ಡಿಸೋಜ ಮನೆ ತನಕ ಪಾದಯಾತ್ರೆ ನಡೆಸಲಿದ್ದಾರೆ.

