Showing 20 of 21651 articles • Page 246 of 1083
ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಜೆಸಿಬಿ ಘರ್ಜಿಸಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಾಗ ಒತ್ತುವರಿದಾರರಿಂದ ವಶಕ್ಕೆ ಪಡೆದಿದೆ. ಮೈಸೂರು ಊಟಿ ರಸ್ತೆಯ ಶಕ್ತಿಧಾಮ ಮುಂಭಾಗ ಸುಮಾರು 38 ಗುಂಟೆ ಜಾಗವನ್ನ ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಪಾರ್ಕಿಂಗ್ ಹಾಗೂ ಟೀ ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದರು.
ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ 21ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು
ಕರಾವಳಿಯ ಜನಪದ ಕ್ರೀಡೆ ಕಂಬಳ. ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಾರಂಪರಿಕ ಕಂಬಳಗಳು ಭಕ್ತಿ ಭಾವದಿಂದ ನಡೆಯುತ್ತಿವೆ. ಉಡುಪಿಯ ಕಟಪಾಡಿಯಲ್ಲಿ ರಾಜ ಮನೆತನದ ಸಂಪ್ರದಾಯಿಕ ಕಂಬಳ ನಡೆಯಿತು. ಇಂತಹ ನೂರಾರು ದೈವಕಂಬಳ ಉಡುಪಿ ಜಿಲ್ಲೆಯಲ್ಲಿ ಭಯ ಭಕ್ತಿಯಿಂದ ನಡೆಯುತ್ತದೆ.
ಉಡುಪಿ: ಬೀದಿ ನಾಯಿ ಶೆಲ್ಟರ್ ನಿರ್ಮಾಣಕ್ಕೆ ವಿರೋಧಿಸಿ ಉಪ್ಪೂರು ಗ್ರಾಮಸ್ಥರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಗರಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಡಳಿತವು ಉಪ್ಪೂರಿನಲ್ಲಿ 9 ಎಕರೆ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಾಣ ಮಾಡಲು ತಯಾರಿ ನಡೆಸಿದೆ. ಶೆಲ್ಟರ್ ನಿರ್ಮಾಣಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೀದಿ ಬಾಯಿಗಳ ಕಾಟದಿಂದ ರೋಸಿ ಹೋಗಿದ್ದ ಜನರಿಗೆ ನೆಮ್ಮದಿ ಕಲ್ಪಿಸುವ ನಿಟ್ಟಿನಲ್ಲಿ […]
ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಬಂಡೆಗಳನ್ನು ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿವಾಹಿತೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ಪೋಸ್ಟ್ ಹಾಕಿರುವ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.7 ರಂದು ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡಲು ಎ.ಜೆ. ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಿಂದ ಕೂದಲು ದಾನ ಶಿಬಿರ
ಮಣಿಪಾಲ ಮ್ಯಾರಥಾನ್’ನ ಎಂಟನೇ ಆವೃತ್ತಿ ಇದೇ ಫೆ.8ರಂದು ಮಣಿಪಾಲ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯಲಿದ್ದು, ಈ ಬಾರಿ ದಾಖಲೆಯ 22,000ಕ್ಕೂ ಅಧಿಕ ಓಟಗಾರರು ವಿದೇಶಗಳಿಂದ ಹಾಗೂ ದೇಶಾದ್ಯಂತದಿಂದ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಕೇರಳದಿಂದ ಹಂಪಿಗೆ ಬರುತ್ತಿದ್ದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ಘಟನೆ ನಡೆದಿದೆ.
ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿಯ ಉದ್ಯಾವರದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್ ಬಹುಮಾನವನ್ನು ಗೆದ್ದಿರುವುದಾಗಿ ವರದಿಯಾಗಿದೆ.
ಮಂಗಳೂರಿನಲ್ಲಿ ತಂತ್ರಜ್ಞಾನದ ಹೊಸ ದಿಗಂತ ತೆರೆದ ಸ್ಪೇನ್ ರಾಯಭಾರಿ: ‘ದ ಗ್ರೇಟ್ ರಿಸೆಟ್’ ಲೋಕಾರ್ಪಣೆ
ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NITK), ಭಾರತದ ಅಮೂಲ್ಯವಾದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಮೀಸಲಾಗಿರುವ ಐದು ದಿನಗಳ ಸಾಂಸ್ಕೃತಿಕ ಉತ್ಸವವಾದ SPICMACAY VIRASAT’26 ಅನ್ನು ಹೆಮ್ಮೆಯಿಂದ ಘೋಷಿಸುತ್ತದೆ.
ಆಲ್ ಅಮೆರಿಕಾ ತುಳು ಅಸೋಸಿಯೇಶನ್ (AATA) ಹಾಗೂ ಬಂಟ್ಸ್ ಅಸೋಸಿಯೇಶನ್ ಆಫ್ ನಾರ್ತ್ ಅಮೆರಿಕಾ (BANA) ಸಂಯುಕ್ತ ಆಶ್ರಯದಲ್ಲಿ 2026ರ ಜನವರಿ 1ರಂದು ‘ಬಲೆ ತುಳು ಪಾತೆರ್ಗ’ ತರಗತಿ–2025’ರ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ zoom ವೇದಿಕೆಯಲ್ಲಿ ಆಯೋಜಿಸಲಾಯಿತು.
ರಾಷ್ಟ್ರೀಯ ಹೆದ್ದಾರಿಯ ನಂತೂರಿನಲ್ಲಿ ಪ್ರೈವರ್ ನಿರ್ಮಿಸುವ ಪ್ರಸ್ತಾವನೆಗ ಸಂಬಂಧಿ ಸಮಗ್ರ ಯೋಜನಾ ವರದಿ ( ಡಿಪಿಆರ್) ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಪಿಲಿಕುಳ ಮೃಗಾಲಯ ಬಂದ್ ಆದೇಶ ಬಂದಿಲ್ಲ, ಪಿಲಿಕುಳ ಮೃಗಾಲಯ ಬಂದ್ ಮಾಡಬೇಕೆಂದು ಹೈಕೋರ್ಟ್ ಆದೇಶ ಕೊಟ್ಟಿರುವುದು ತಮಗೆ ಗೊತ್ತಿಲ್ಲ. ಅಂತಹ ಯಾವುದೇ ಆದೇಶ ತಮಗೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಮಾಹಿತಿ ನೀಡಿದರು.
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿಕೊಂಡು ಭಾರಿ ಮೊತ್ತದ ಹೂಡಿಕೆ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕೈಂ ಪೊಲೀಸ್ ಠಾಣೆಯವರು ಭೇದಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಸಿಗರೆಟ್, ವಾಟರ್ ಬಾಟಲ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ.
1986, ಫೆಬ್ರವರಿ 6, ರೋಮನ್ ಕ್ಯಾಥೋಲಿಕ್ ಚರ್ಚಿನ ಪರಮಗುರು, ಕ್ರೈಸ್ತ ಸಮುದಾಯದ ಜಗದ್ಗುರು 2 ನೇ ಜೋನ್ ಪಾವ್ಲ್ ಅವರ ಪಾದಸ್ಪರ್ಶದಿಂದ ಪಾವನವಾದ ಪುಟ್ಟ ಊರು ಕರ್ನಾಟಕದ ಮಂಗಳೂರಿನ ನಮ್ಮ ಹೆಮ್ಮಯ ಬಜ್ಪೆ. ಇತಿಹಾಸದ ಆ ಅವಿಸ್ಮರಣೀಯ ದಿನ ಇಂದಿಗೂ ಬಜ್ಪೆಯ ನಾಗರಿಕರಿಗೆ ಜೀವಮಾನದ ಮರೆಯಲಾಗದ ದಿನವಾಗಿ ಉಳಿದಿದೆ.
ಪ್ರಸಕ್ತ ಶೈಕ್ಷಣಿಕ ವಿದ್ಯಮಾನದಲ್ಲಿ ಶಿಕ್ಷಣ ಕೇವಲ ಪದವಿಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತು ಪ್ರತಿಭಾನ್ವೇಷಣೆಯಲ್ಲಿದೆ. ಈ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಮಕ್ಕಳು ವೃತ್ತಿಪರ ಕ್ಷೇತ್ರದಲ್ಲಿ ಮುನ್ನಡೆಯಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವಪೂರ್ಣವಾಗಿರುತ್ತದೆ.
ಬೈಕ್ ಗೆ ಕಾರು ಡಿಕ್ಕಿ ಹೊಡೆದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.