ಬೆಳಗಾವಿ : ಸಿಗರೆಟ್, ವಾಟರ್ ಬಾಟಲ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ನಾಯಕ್(48) ಮೃತ ದುರ್ದೈವಿ. ರಾತ್ರಿ ಜಾತ್ರೆಯಿಂದ ವಾಪಾಸ್ ಹೋಗುತ್ತಿದ್ದ ನಾಲ್ಕು ಜನ ಯುವಕರು ಮಾರ್ಗ ಮಧ್ಯದಲ್ಲಿ ಅಂಗಡಿ ಬಳಿ ನಿಂತು ಸಿಗರೆಟ್, ನೀರಿನ ಬಾಟಲ್ ಯುವಕರು ತೆಗೆದುಕೊಂಡಿದ್ದರು. ಹಣ ಕೊಡದೇ ಹೋಗುತ್ತಿದ್ದನ್ನ ಯಲ್ಲಪ್ಪ ಪ್ರಶ್ನಿಸಿದ್ದರು.

ಈ ವೇಳೆ ಅವಾಚ್ಯವಾಗಿ ನಿಂದಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.ಗಂಭೀರವಾಗಿ ಗಾಯಗೊಂಡವ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಪ್ರಜ್ವಲ್ ಪಾಟೀಲ್(22), ನಿಖಿಲ್ ಚೌಗಲೆ(22), ವಿವೇಲ್ ಚೌಗಲೆ, ಶ್ರೀಧರ್ ಪಾಟೀಲ್ ಇವರನ್ನು ಬಂಧಿಸಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

