Showing 20 of 21651 articles • Page 237 of 1083
ಪಥನಂತಿಟ್ಟದ ಮಲ್ಲಪ್ಪಳ್ಳಿಯ ಅಲಿನ್ ಶೆರಿನ್ ಅಬ್ರಹಾಂ ಎಂಬ ಶಿಶು ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿದೆ. ಆಕೆಯ ಅಂಗಾಂಗಗಳು ಮತ್ತೊಂದು ಶಿಶು ಸೇರಿದಂತೆ ಐದು ಜನರಿಗೆ ಹೊಸ ಚೈತನ್ಯ ನೀಡಲಿವೆ.
ಅಧಿವೇಶನದಲ್ಲಿ ವಿಪರೀತ ವರ್ತನೆಗೆ ರಾಹುಲ್ ಗಾಂಧಿಯನ್ನು ಯತ್ನಾಳ್ ಟೀಕಿಸಿದರು. ರಾಹುಲ್ ಗಾಂಧಿ ಒಬ್ಬ ಅಪ್ರಾಪ್ತ ಬುದ್ಧಿಹೀನ. ಸದನದಲ್ಲಿ ಚರ್ಚೆ ಮಾಡೋಲ್ಲ ಅಂದ್ರೆ ಹೇಗೆ. ಬಿಡುಗಡೆಯಾಗದ ಪುಸ್ತಕದ ಬಗ್ಗೆ ಮಾತನಾಡುತ್ತಾರೆ. ನೆಹರು ಮನೆತನದ ಹಗರಣಗಳು ಸೆಕ್ಸ್ ಹಗರಣಗಳು ಸಾಕಷ್ಟು ಈ ದೇಶದಲ್ಲಿ ಇದೆ ಎಂದರು.
ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ವಿಚಾರವಾಗಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ!
ಅನಂತ್ ಕುಮಾರ್ ಹೆಗಡೆ ರಾಜ್ಯರಾಜಕಾರಣಕ್ಕೆ ಮರಳುವ ವಿಚಾರವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಅನಂತ್ ಕುಮಾರ್ ಹೆಗಡೆ ವೈಯಕ್ತಿಕವಾಗಿ ಎಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದೆಹಲಿಗೆ ಬುಲಾವ್ ಎಂದು ಹೇಳುತ್ತಿದ್ದಾರೆ ಎಂದರು.
ಈ ಬಾರಿ ಅಧಿವೇಶನದಲ್ಲಿ ಜನರ ತೆರಿಗೆ ಹಣ ಹಾಳು ಮಾಡುವ ಕೆಲಸವಾಯಿತು.
ಕುಂದಾಪುರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಮರಳು, ಬೋಟ್ ಸಹಿತ 22 ಮಂದಿಯ ಬಂಧನ
ಬಿಜೈ ಚರ್ಚ್ ರಸ್ತೆಯ ‘ಕ್ಯಾಮಲಾಟ್’ನಲ್ಲಿ ಫೆಬ್ರವರಿ 14 ರಂದು ಸಂಜೆ 5 ಗಂಟೆಗೆ ವಿವಾಹ ಜೀವನದ ಐವತ್ತು ವರ್ಷಗಳನ್ನು ಪೂರೈಸಿದ ದಂಪತಿಗಳಿಗಾಗಿ ಡಾ. ಮೈಕೆಲ್ ಲೋಬೊ ಅವರು ವಿಶೇಷ ‘ಗೋಲ್ಡನ್ ಕಪಲ್ಸ್’ (ಸುವರ್ಣ ದಂಪತಿಗಳು) ಪುನರ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಸೀಲ್ ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ನಗರಕ್ಕೆ ಬೆಂಗಳೂರು ನಗರದಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಖರೀದಿಸಿಕೊಂಡು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೂದು ಬಣ್ಣದ ಸ್ವೀಪ್ಟ್ ಕಾರಿನಲ್ಲಿ ಉಳ್ಳಾಲ ತಾಲೂಕಿನ ತಲಪಾಡಿಯ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎಂಡಿಎಂಎ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಕಾರನ್ನು ಪತ್ತೆ ಹಚ್ಚಿ ಮೂವರ ಬಂಧನ ಮಾಡಿದ್ದಾರೆ.
2024-25ರಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದಕ್ಕಾಗಿ 4,817.96 ಕೋಟಿ ರೂ. ದಂಡವನ್ನು ವಿಧಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಗ್ರಾಮದ ಶರವೂರಿನ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 2ರವರೆಗೆ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಡಾ . ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಹೇಮಂತ ರೈ ತಿಳಿಸಿದರು.
ಭಕ್ತಿಯ ಪರಮಾವಧಿ, ಬಾಯಿಗೆ ಬೀಗ ಹಾಕಿಕೊಂಡು ಮಾರಮ್ಮನಿಗೆ ಹರಕೆ ಸಲ್ಲಿಸುವ ಚುಂಚನಹಳ್ಳಿ ಗ್ರಾಮಸ್ಥರು
ಬೀದಿಬದಿ ವ್ಯಾಪಾರಿಗಳ ಮೇಲೆ ಲೋಕೋಪಯೋಗಿ ಮತ್ತು ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ ದೌರ್ಜನ್ಯವನ್ನು ಸಮಗ್ರವಾಗಿ ಎದುರಿಸಲು ಫೆಬ್ರವರಿ 17 ರಂದು ಬೆಳಿಗ್ಗೆ 10ಗಂಟೆಗೆ ಕುತ್ತಾರಿನಲ್ಲಿರುವ ಮುನ್ನೂರು ಯುವಕ ಮಂಡಲದ ಸಭಾಭವನದಲ್ಲಿ ಉಳ್ಳಾಲ ತಾಲೂಕು ಮಟ್ಟದ ಬೀದಿಬದಿ ವ್ಯಾಪಾರಸ್ಥರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಅವರು ತೊಕ್ಕೊಟ್ಟುವಿನಿಂದ ನಾಟೆಕಲ್ ವರೆಗಿನ ಬೀದಿಬದಿ ವ್ಯಾಪಾರಿಗಳನ್ನು ಬುಲ್ದೊಜರ್ ಬಳಸಿ ಕಾರ್ಯಾಚರಣೆ ಮಾಡಿರುವ ಕ್ರಮವನ್ನು ಖಂಡಿಸಿ ಇಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಉಳ್ಳಾಲ ತಾಲೂಕು ಸಮಿತಿ (ಸಿಐಟಿಯು) ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು. ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆ, ನಾಟೆಕಲ್, ಕೋಟೆಕಾರ್, ತಲಪಾಡಿ ಭಾಗದ ಹಲವಾರು ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
ಏಕ ಬಳಕೆ ಪ್ಲಾಸ್ಟಿಕ್, ಕೈ ಚೀಲ ಬಳಕೆ ಮಾಡಿದಲ್ಲಿ 10,000 ದಂಡ ವಿಧಿಸಲಾಗುತ್ತದೆ. ಹಸಿಕಸ-ಒಣಕಸವನ್ನು ವಿಂಗಡಿಸಿ ಕೊಡುವ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡಲಾಯಿತು.
ಫೇರ್ವೆಲ್ ಪಾರ್ಟಿ ಮುಗಿಸಿ ವಾಪಸ್ ಆಗುತ್ತಿದ್ದ ವಿದ್ಯಾರ್ಥಿ ಕಾರು ಹಲವರಿಗೆ ಡಿಕ್ಕಿ ಹೊಡೆದಿದ್ದು, 6 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ನಮ್ಮ ಸರ್ಕಾರವು ಉಚಿತವಾಗಿ ಸ್ಮಾರ್ಟ್ಕಾರ್ಡ್ ನೀಡಲು ನಿರ್ಧರಿಸಿದೆ.
17 ವರ್ಷಗಳ ಕಾಲ ದೇಶಕ್ಕೆ ಅಚಲ ಸೇವೆ ಸಲ್ಲಿಸಿದ ನಂತರ, ಸೇನಾ ಅಧಿಕಾರಿಯೊಬ್ಬರು ಕುದುರೆ ಏರಿ ಮನೆಗೆ ಬಂದರು. ಈ ವೇಳೆ ಭಾವನಾತ್ಮಕ ಪುನರ್ಮಿಲನ ನಡೆಯಿತು.
ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಭವಿಷ್ಯ ಕಾಪಾಡುವ ದೃಷ್ಟಿಯಿಂದ ಆನ್ ಲೈನ್ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸುವಂತೆ ಯುವಭಾರತ್ ಸಂಘಟನೆ ಮತ್ತು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪದಾಧಿಕಾರಿಗಳು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ರವರಿಗೆ ಮತ್ತು ಸಿದ್ಧಾರ್ಥನಗರದಲ್ಲಿರುವ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಪತ್ರ ನೀಡಿದ್ದಾರೆ.
ಜ್ಯೋತಿಷಿ ಮಾತು ನಂಬಿ ಹೆತ್ತ ತಾಯಿಯನ್ನೇ ಮಗಳು ಉಸಿರುಗಟ್ಟಿಸಿ ಕೊಂದ ಘಟನೆ ತುಮಕೂರಿನ ಶ್ರೀನಗರದಲ್ಲಿ ನಡೆದಿದೆ.