ಕೊಡಗು : ಉರುಳಿಗೆ ಸಿಲುಕಿ ಹುಲಿಯೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗಿನ ಶ್ರೀಮಂಗಳ ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಚಟ್ಟಳ್ಳಿ ಬಳಿಯ ಶ್ರೀಮಂಗಳ ತೋಟದ ಬೇಲಿಗೆ ದುಷ್ಕರ್ಮಿಗಳು ಉರುಳು ಹಾಕಿದ್ದರು. ಈ ವೇಳೆ ಗಂಡು ಹುಲಿ, ಉರುಳಿಗೆ ಸಿಲುಕಿ ಸಾವನ್ನಪ್ಪಿದೆ.
ಕೆಚ್ಚಿಟ್ಟಿರ ಅಪ್ಪಯ್ಯ ತೋಟದಲ್ಲಿ ಒಂದು ಘಟನೆ ಸಂಭವಿಸಿದೆ ಉರುಳಿಗೆ ಸಿಲುಕಿ ನರಳಾಡಿ ಗಂಡು ಹುಲಿ ಪ್ರಾಣ ಬಿಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಹುಲಿ ಓಡಾಟ ಹೆಚ್ಚಾಗಿದ್ದು, ಅನೇಕ ಬಾರಿ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿದೆ.

