Showing 20 of 21651 articles • Page 231 of 1083
ಮಲ್ಪೆ ಬಂದರು ಸಮೀಪ ಖಾರದ ಪುಡಿ ಎರಚಿ ಮೀನು ವ್ಯಾಪಾರಿಗೆ ಹಲ್ಲೆ ಮಾಡಿ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಮಾಳ, ಬಜಗೋಳಿ ಪರಿಸರದಲ್ಲಿ ಶನಿವಾರ ಸಂಜೆ ಅಕಾಲಿಕ ಮಳೆ ಸುರಿದಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪರ್ಸನಲ್ ಸೆಕ್ರೆಟರಿ ಮಗ ಹೇಮಂತ್ (20) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಎಂದು ಗುರುತಿಸಲಾಗಿದೆ.
ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ), ಮಂಗಳೂರು, ತನ್ನ ಪಿಜಿ ಪದವಿ ಪ್ರದಾನ ಸಮಾರಂಭವನ್ನು 2026ರ ಫೆಬ್ರವರಿ 21ರಂದು ಬೆಳಿಗ್ಗೆ 10.00 ಗಂಟೆಗೆ ಕಾಲೇಜಿನ ಕಲಾಂ ಸಭಾಂಗಣದಲ್ಲಿ ಆಚರಿಸಿತು.
ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಮದ್ದೂರು ಪಟ್ಟಣದ ಶಿಂಷಾ ನದಿಯಲ್ಲಿ ಬೆಳೆದಿದ್ದ ಮರಗಳಿಗೆ ಕಿಡಿಗೇಡಿಗಳು ಕತ್ತರಿ ಹಾಕಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದ್ದು, ಅನುಮತಿ ಇಲ್ಲದೇ ಮರ ಕಡಿದ ಬಗ್ಗೆ ಸಾರ್ವಜನಿಕರ ದೂರು ನೀಡಿದ್ದಾರೆ.
ಉಚಿತ ಸಿಟಿ ಸ್ಕ್ಯಾನ್ ಸೇವೆ ಬಂದ್ ಬಡರೋಗಿಗಳ ಸಂಕಷ್ಟ ಎದುರಾಗಿದ್ದು, ಉಡುಪಿ ಜಿಲ್ಲಾಸ್ಪತ್ರೆಯಲ್ಲೂ ಸಿಟಿ ಉಚಿತ ಸ್ಕ್ಯಾನಿಂಗ್ ಸೇವೆ ಬಂದ್ ಮಾಡಲಾಗಿದೆ.
ಸಮಾಜಘಾತುಕ ಶಕ್ತಿಗಳ ವಿರುದ್ದ ಮೈಸೂರು ಖಾಕಿ ಪಡೆ ಸಮರ ಸಾರಿದೆ.ಕ್ರಿಮಿನಲ್ ಆಕ್ಟಿವಿಟಿಗಳ ನಿಯಂತ್ರಣಕ್ಕೆ ಡ್ರೋಣ್ ನೆರವು ಪಡೆಯಲಾಗಿದೆ.ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಖಾಕಿ ಪಡೆ ವಿಶೇಷ ಕಾರ್ಯಾಚರಣೆಗೆ ಇಳಿದಿದೆ.
ತಂಬಾಕಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳೆಗಾರರಿಂದು ಚಿಲ್ಕುಂದ ಬೋರ್ಡ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಹಲವು ದಿನಗಳಿಂದ ಓಡಾಡಿ, ಸಾಕುನಾಯಿ ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡಿ ರೈತರಲ್ಲಿ ಭಯ ಮೂಡಿಸಿದ್ದ ಚಾಲಾಕಿ ಚಿರತೆ ಸೆರೆಯಾದ ಘಟನೆ ಗುಂಡ್ಲುಪೇಟೆ ಪಟ್ಟಣ ಹೊರವಲಯದ ಮನಗಳ್ಳಿಯಲ್ಲಿ ನಡೆದಿದೆ.
ಇಂದು ನಗರದ ಮಂಗಳೂರಿನ ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐ ಆರ್ ಗ್ರೂಪ್ ತನ್ನ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲು ಭೂಮಿ ಪೂಜೆ ಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿವಂದನೀಯ ಡಾ. ಪೀಟರ್ ಪೌಲ್ ಸಲ್ದಾನ ನೆರವೇರಿಸಿ ಆಶೀರ್ವದಿಸಿದರು.
ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಮೂರು ಮಂದಿ ಯುವಕರ ತಂಡವೊಂದು ವೃದ್ದೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಶಂಕರಪುರದಲ್ಲಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 25ರಂದು ಜಿಲ್ಲೆಗೆ ಆಗಮಿಸಿ, ಕಾರ್ಕಳ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕಾಸರಗೋಡಿನ ಕಯ್ಯಾರು ಗ್ರಾಮದಲ್ಲಿರುವ ಕ್ರಿಸ್ತರಾಜ ದೇವಾಲಯವು ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಟ್ಟಿದ್ದು ಮಂಗಳೂರು ನಗರದಿಂದ ಸುಮಾರು 42 ಕಿಮೀ ದೂರದಲ್ಲಿದೆ. ಕಯ್ಯಾರು ಅನೇಕ ಭಾಷೆಗಳು ಸೌಹಾರ್ದದಿಂದ ಬೆರೆತು ಬದುಕುವ ನೆಲ. ನೈಸರ್ಗಿಕ ಸೌಂದರ್ಯ ಹಾಗೂ ಬೌದ್ಧಿಕ ಪರಂಪರೆಯಲ್ಲಿ ಸಮೃದ್ಧವಾದ ಕಯ್ಯಾರು, ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈಯವರನ್ನೊಳಗೊಂಡಂತೆ ಅನೇಕ ಕವಿಗಳು ಮತ್ತು ಕಲಾವಿದರನ್ನು ಹುಟ್ಟಿಸಿದ ತಾಯಿ ನೆಲ. ಪೂಸಡಿ ಗುಂಪೆ ಮೊದಲಾದ ಸೊಬಗಿನ ಸ್ಥಳಗಳಿಂದ ಕಯ್ಯಾರು ಸಾಂಸ್ಕೃತಿಕ ಮತ್ತು ಸೌಂದರ್ಯ ಮೌಲ್ಯಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳ ಮೀಸಲಾತಿ ವರದಿಯ ಸಮಸ್ಯೆಯೂ ಪೂರ್ಣವಾಗಿ ಬಗೆಹರಿವ ತನಕ ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳ ಮೀಸಲಾತಿಯ ಕಾರ್ಯ ಚಟುವಟಿಕೆಗಳನ್ನು ಶೀಘ್ರವೇ ತಡೆಯಾಜ್ಞೆ ನೀಡಬೇಕು ಎಂದು ಆಗ್ರಹಿಸಿ ನಂಜನಗೂಡಿನಲ್ಲಿ ಜನಸಂಗ್ರಾಮ ಪರಿಷತ್ ನಿಂದ ಮನವಿ ಸಲ್ಲಿಸಲಾಯಿತು.
ಹೊಸರಾಮನಹಳ್ಳಿ ದಂಡಮ್ಮದೇವಿ ಜಾತ್ರೆ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. ವಿಜೃಂಭಣೆಯಿಂದ ಹೊಸರಾಮನಹಳ್ಳಿ ದಂಡಮ್ಮ ಜಾತ್ರೆ ಜರುಗಿತು. ಬಾಡೂಟವೇ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ವಿಶೇಷವಾಗಿದೆ.
ಕೆಲವು ಕಡೆ ರಸ್ತೆ ಕಾಮಗಾರಿ ಹಿನ್ನಲೆ ಬಸ್ ಚಾಲನೆ, ಸಮಯ ಪರಿಪಾಲನೆ ಕಷ್ಟವಾಗುತ್ತಿದೆ. ಕದ್ರಿ, ಕೆಪಿಟಿ,ಕೆಲವು ಕಡೆಗಳಲ್ಲಿ ಬಸ್ ಹೋಗಲು ಪೊಲೀಸರು ಅನುವು ಮಾಡಿದಲ್ಲಿ ಈಗಿನ ಪರಿಸ್ಥಿತ್ಗೆ ಸಂಚಾರ ಸುಗಮವಾಗಲಿದೆ.
ಸಂಗೀತ ಭಾರತಿ ಫೌಂಡೇಶನ್ (ರಿ) ಸಂಸ್ಥೆಯ ಆಶ್ರಯದಲ್ಲಿ ‘ಸ್ತ್ರೀ’ ಪರಿಕಲ್ಪನೆಯ ವಿನೂತನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಫೆ.22ರಂದು ಸಂಜೆ 5 ಗಂಟೆಗೆ ನಗರದ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಗೀತ ಭಾರತಿ ಫೌಂಡೇಶನ್ನ ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್.ನಾಯಕ್ ತಿಳಿಸಿದ್ದಾರೆ.