ಮೈಸೂರು: ಸಮಾಜಘಾತುಕ ಶಕ್ತಿಗಳ ವಿರುದ್ದ ಮೈಸೂರು ಖಾಕಿ ಪಡೆ ಸಮರ ಸಾರಿದೆ.ಕ್ರಿಮಿನಲ್ ಆಕ್ಟಿವಿಟಿಗಳ ನಿಯಂತ್ರಣಕ್ಕೆ ಡ್ರೋಣ್ ನೆರವು ಪಡೆಯಲಾಗಿದೆ.ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಖಾಕಿ ಪಡೆ ವಿಶೇಷ ಕಾರ್ಯಾಚರಣೆಗೆ ಇಳಿದಿದೆ.
ಗಾಂಜಾ ಪೆಡ್ಲರ್ ಗಳ ಜಾಡು ಅರಿತು ದಾಳಿ ನಡೆಸಲಾಗುತ್ತಿದೆ. ಸಮಾಜಘಾತುಕ ಶಕ್ತಿಗಳ ಹುಟ್ಟಡಗಿಸಲು ನಗರ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಡಲಿದೆ.ಈಗಾಗಲೇ ಡ್ರೋಣ್ ಮೂಲಕ ಸರ್ಚ್ ನಡೆಯುತ್ತಿದೆ. ಇಂದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾನಗರ, ಅಜೀಜ್ ಸೇಠ್ ನಗರ,ಕೆ.ಎನ್.ಪುರ ಸೇರಿದಂತೆ ವಿವಿದ ಸ್ಥಳಗಳಲ್ಲಿ ನಿರೀಕ್ಷಕರಾದ ಕೆ.ಎನ್.ಸುಧಾಕರ್ ರವರು ತಮ್ಮ ಸಿಬ್ಬಂದಿಗಳ ನೆರವಿನಿಂದ ಡ್ರೋಣ್ ಸರ್ವೆಲೆನ್ಸ್ ನಡೆಸಿದ್ದಾರೆ.
ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ.ಗುಂಪು ಕಟ್ಟುವುದು,ಗಾಂಜಾ ಪೆಡ್ಲರ್ ಗಳ ಬೆನ್ನಟ್ಟುವುದು,ಸಮಾಜದ ಸ್ವಾಸ್ಥ್ಯ ಕದಡುವ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಸನ್ನದ್ದರಾಗಿದ್ದಾರೆ.ಹುಷಾರ್ ಅನಾವಶ್ಯಕವಾಗಿ ಬಾಲ ಬಿಚ್ಚಿದ್ರೆ ಕಟ್ ಮಾಡೋದಂತು ಗ್ಯಾರೆಂಟಿ.

