ಮೈಸೂರು : ಹೊಸರಾಮನಹಳ್ಳಿ ದಂಡಮ್ಮದೇವಿ ಜಾತ್ರೆ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. ವಿಜೃಂಭಣೆಯಿಂದ ಹೊಸರಾಮನಹಳ್ಳಿ ದಂಡಮ್ಮ ಜಾತ್ರೆ ಜರುಗಿತು. ಬಾಡೂಟವೇ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ವಿಶೇಷವಾಗಿದೆ.

ಎರಡು ದಿನ ದಂಡಮ್ಮದೇವಿಗೆ ಪೂಜೆ ಪುನಸ್ಕಾರ ನಡೆಯುತ್ತದೆ. ಅದ್ಧೂರಿಯಾಗಿ ದಂಡಮ್ಮ ದೇವಿಯ ಮೆರವಣಿಗೆ ಜರುಗಿತು.ದೇವಿಗೆ ಪೂಜೆ ಸಲ್ಲಿಸಿ ಸಹಸ್ರಾರು ಭಕ್ತರು ಬಾಡೂಟ ಸವಿದರು. ಹುಣಸೂರು ತಾಲ್ಲಕಿನ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ತಟದಲ್ಲಿ ‌ಉತ್ಸವ ನಡೆಯಿತು.

ಹರಕೆಯ ಮರಿ ಒಪ್ಪಿಸಿ ಗ್ರಾಮಸ್ಥರಿಂದ ಬಾಡೂಟ ಮಾಡಲಾಯಿತು. ದಂಡಮ್ಮ ದೇವಿ ಉತ್ಸವಕ್ಕಾಗಿ ಸಂಕ್ರಾಂತಿಯಂದು ಗ್ರಾಮಸ್ಥರಿಂದ ಪೂಜೆ ನಡೆದಿತ್ತು. ದಂಡಮ್ಮನ ಜಾತ್ರೆಗೆ ಸಂಕ್ರಾಂತಿ ಹಬ್ಬದಿಂದ ಭತ್ತ, ಸೇರಿ ದವಸ ಧಾನ್ಯ ಸಂಗ್ರಹ ಮಾಡಲಾಗಿತ್ತು. ಒಂದು ತಿಂಗಳಿನಿಂದ ರಾಶಿ ರಾಶಿ ಭತ್ತ ಸಂಗ್ರಹಿಸಿ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ನಿನ್ನೆ ರಾತ್ರಿಯಿಂದಲೇ ಬಾಡೂಟ ತಯಾರಿಯನ್ನು ಗ್ರಾಮಸ್ಥರು ಮಾಡಿದರು. ಸುತ್ತಮುತ್ತಲ 33 ಗ್ರಾಮಗಳ ಗ್ರಾಮಸ್ಥರಿಂದ ದಂಡಮ್ಮ ದೇವಿ ಪೂಜೆ ನಡೆಯಿತು. 50 ಸಾವಿರಕ್ಕು ಹೆಚ್ಚು ಭಕ್ತರು ದಂಡಮ್ಮ ಜಾತ್ರೆಗೆ ಸೇರಿದ್ದರು.