ಮೈಸೂರು: ತಂಬಾಕಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳೆಗಾರರಿಂದು ಚಿಲ್ಕುಂದ ಬೋರ್ಡ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ತಂಬಾಕಿಗೆ ಸೂಕ್ತ ಬೆಲೆ ಲಭ್ಯವಾಗದ ಹಿನ್ನಲೆ ಆಕ್ರೋಶ ವ್ಯಕ್ತಪಡಿಸಿದ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಬೋರ್ಡ್ ಬಂದ್ ಮಾಡಿ ಪ್ರತಿಭಟನೆಗೆ ಇಳಿದರು. ಹೊಗೆಸೊಪ್ಪಿಗೆ ಗರಿಷ್ಠ 270 ಕನಿಷ್ಠ 200 ರೂ ಸಿಗುತ್ತಿದೆ. ಅಲ್ಲದೆ ತೂಕದಲ್ಲೂ ವೆತ್ಯಾಸವಾಗುತ್ತಿದೆ.

ಆಂಧ್ರದಲ್ಲಿ 400 ರಿಂದ 500 ರೂ ವರೆಗೆ ಬೆಲೆ ಸಿಗುತ್ತಿದೆ. ನೆರೆಯ ರಾಜ್ಯದಲ್ಲಿ ಸಿಗುವ ಬೆಲೆ ನಮಗೆ ಸಿಗುತ್ತಿಲ್ಲವೆಂದು ಆಕ್ರೋಷ ವ್ಯಕ್ತಪಡಿಸಿದರು. ಕೂಡಲೇ ಆಂಧ್ರದಲ್ಲಿ ಸಿಗುವ ದರವನ್ನ ನಮ್ಮ ರಾಜ್ಯದಲ್ಲೂ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.