ತಿ. ನರಸೀಪುರ: ಕಾಮಗಾರಿ ಪ್ರಾರಂಭ ಮಾಡಿ ಒಂದು ತಿಂಗಳಾದರೂ ಕಾಮಗಾರಿ ಪರಿಪೂರ್ಣಗೊಳಿಸದೆ ಅರೆಬರೆ ಕಾಮಗಾರಿ ಎಂದು ಕುರುಬೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಿಡಬ್ಲ್ಯೂಡಿ ಇಲಾಖೆಯ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗಂಭೀರ ಆರೋಪ ಮಾಡಿದರು. ರಸ್ತೆ ಕಾಮಗಾರಿಯಿಂದ ರಸ್ತೆ ಹಗೆದು 20 ದಿನದಿಂದ ನೀರಿಲ್ಲದಂತಾಗಿದೆ. ಈ ವಿಚಾರವಾಗಿ ಲೋಕಪಯೋಗಿ ಅಧಿಕಾರಿಗಳನ್ನು ಕೇಳಿದರೆ ಕುಡಿಯುವ ನೀರಿನ ಇಲಾಖೆ ಗೆ ಸಂಬಂಧಪಟ್ಟಿದ್ದು ಹೇಳುತ್ತಾರೆ.

ಕುಡಿಯುವ ನೀರಿನ ಇಲಾಖೆಯವರಿಗೆ ಕೇಳಿದರೆ ಲೋಕಪಯೋಗಿ ಇಲಾಖೆಯವರು ಎಂದು ರೈತರ ಕಷ್ಟ ಕಂಡು ನಗಾಡಿ ಹಾಸ್ಯ ಮಾಡುತ್ತಾರೆ ಎಂದು ಕುರುಬೂರು ಗ್ರಾಮಸ್ಥರ ಅಳಲು ತೋಡಿಕೊಂಡರು. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಗ್ರಾಮಸ್ಥರೆಲ್ಲ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.