ಮಂಗಳೂರು: ಅಡ್ಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಆಂಗ್ಲ ಮಾಧ್ಯಮ ಶಾಲೆಯು ಆರಂಭಗೊಂಡು ಸರ್ಕಾರಿ ಶಾಲೆಯೂ ಹೊಸ ಹುರುಪಿನಲ್ಲಿ ಕಾರ್ಯಾಚರಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಐತಿಹಾಸಿಕವಾಗಿ ನಡೆಯಿತು.

ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಫರಾ ನಾಸಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಿದಾಯತ್ ಪ್ರಸ್ತಾವಿಕ ಭಾಷಣ ಮಾತನಾಡಿ ಭವಿಷ್ಯದ ಶಾಲೆಯ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದರು. ಮಂಗಳೂರು ಶಿಕ್ಷಣ ವಿಭಾಗದ BEO ಮತ್ತು CRP ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

UP ಇಬ್ರಾಹಿಂ ಮತ್ತು ಅಶ್ರಫ್ ನಡುಗುಡ್ಡೆ ಅತಿಥಿಗಳಾಗಿ ಶಾಲೆಯ ಬೆಳವಣಿಗೆ ಮತ್ತು ಸರ್ಕಾರಿ ಶಾಲೆಯ ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ಮಕ್ಕಳ ಸಾಂಸ್ಕೃತಿಕ ಕಲಾ ಪ್ರತಿಭೆಯು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕ್ರೀಡೆ ಮತ್ತು ಇತರ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಕ್ರೀಡೆಯಲ್ಲಿ ವಿಶೇಷ ಸಾಧನೆಗಾಗಿ ನಮ್ರಿತ ಟೀಚರ್, ಅನಿವಾಸಿ ಉದ್ಯಮಿ ಬಿಸಿಸಿಐ ಅಧ್ಯಕ್ಷರಾದ ಹಿದಾಯತ್, ಅಹ್ಮದ್ ಬಾವ ತೋಕುರ್ ಅವರನ್ನು ಸನ್ಮಾನಿಸಲಾಯಿತು.

SDMC ಕಮರುದ್ದಿನ್ ಅಧ್ಯಕ್ಷತೆ ವಹಿಸಿದ್ದರು. ತನುಶ್ರೀ ಟೀಚರ್ ಸ್ವಾಗತಿಸಿ, ಶ್ವೇತಾ ಟೀಚರ್ ವಂದಿಸಿ, ನಮ್ರತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.