Showing 20 of 21629 articles • Page 181 of 1082
ಬ್ರೆಜಿಲ್ನ ಒಲಿಂಪಿಕ್ ಪಾರ್ಕ್ ವೆಲೊಡ್ರೋಮ್ನಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಸುಮಾರು 80 ಅಗ್ನಿಶಾಮಕ ದಳದ ಸಿಬಂದಿಗಳು 20 ವಾಹನಗಳೊಂದಿಗೆ ತುರ್ತು ಕಾರ್ಯಾಚರಣೆ ನಡೆಸಿ ನಿಯಂತ್ರಣಕ್ಕೆ ತಂದಿದ್ದಾರೆ.
ಸಿದ್ದಾಪುರ ತಾಲೂಕ್ ಉತ್ತರಕನ್ನಡ ಜಿಲ್ಲೆಯ ಕಾನಗೋಡ್ ಗ್ರಾಮದಲ್ಲಿ ಅಕ್ರಮ ಗೋವು ಸಾಗಾಣಿಕೆ ವಾಹನವನ್ನು ಸಿದ್ದಾಪುರದ ಭಜರಂಗ ದಳದ ಹರೀಶ್ ಕುಮಾರ್ ಹಿಡಿದಿದ್ದಾರೆ.
ಮಾತು ಬಾರದ, ಕಿವಿ ಕೇಳದ ವ್ಯಕ್ತಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಿತ್ರವೆಂದರೆ ಬಂಧಿತ ಆರೋಪಿಗಳೂ ಕಿವಿ ಕೇಳದ, ಮಾತು ಬಾರದವರೇ ಆಗಿದ್ದಾರೆ.
ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ ಗುರುವಾರ ಹೊಸ ಮಾರ್ಗವನ್ನು ಸೂಚಿಸಿದೆ.
2026ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಗುರುವಾರ ಪ್ರಕಟಗೊಂಡಿದೆ.
ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ ಏ 12 ರಂದು ಆದಿತ್ಯವಾರ ಬೆಳಗ್ಗೆ 6 ಗಂಟೆಗೆ 6ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ನಡೆಯಲಿದೆ.
ಹುಬ್ಬಳ್ಳಿ ,ಧಾರವಾಡ ಜಿಮ್ನಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್ ಪಿ ಭಜರಂಗದಳ ಮಂಗಳೂರು ಈ ಪ್ರಕರಣವನ್ನ ಖಂಡಿಸಿದೆ.
ಎಎಸ್ಸೆ ಐತಪ್ಪ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಗುರುಪುರ ಶಾಂಭವಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಶೋಧಕಾರ್ಯದ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ.
ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವತಿಯಿಂದ ಗುಡ್ಡೆಗುಳಿಗ ದೈವಸ್ಥಾನದಲ್ಲಿ ಕಾಲಾವಧಿ ಕೋಲ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಸಂಘದ ಮಾಸಿಕ ಪತ್ರಿಕೆ ‘ಸನ್ಮತಿ’ ಮಾರ್ಚ್ ತಿಂಗಳ ಸಂಚಿಕೆಯ ಬಿಡುಗಡೆ ಹಾಗೂ 2025–28ನೇ ಸಾಲಿನ ಗಣ್ಯರೊಂದಿಗೆ ಸಂವಾದ ‘ತಿಂಗಳ ಅಂಗಳ’ ಕಾರ್ಯಕ್ರಮದ ಉದ್ಘಾಟನೆ ಗುರುವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆಯಿತು.
ಯುವಿಯೈಟಿಸ್ ಎಂಬುದು ಕಣ್ಣಿನ ಉರಿಯೂತದ ಒಂದು ವಿಧವಾಗಿದೆ. ಇದು ಐರಿಸ್, ಸಿಲಿಯರಿ ಬಾಡಿ, ಮತ್ತು ಕೋರಾಯ್ ಅನ್ನು ಒಳಗೊಂಡಿರುವ ಕಣ್ಣಿನ ಮಧ್ಯದ ಪದರದ ಮೇಲೆ ಪರಿಣಾಮ ಬೀರುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು ಮತ್ತು ಇದನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ, ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪುಣ್ಯವಸರದಲ್ಲಿ, ಪೂರ್ವ ಸಂಪ್ರದಾಯದಂತೆ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವನ್ನು ಸಕಲ ಬಿರುದಾವಳಿಗಳೊಂದಿಗೆ ಶ್ರೀ ಕ್ಷೇತ್ರ ಪೊಳಲಿಗೆ ಆರಾಡದ ದಿನ ತರಲಾಗುತ್ತದೆ. ಅದೇ ದಿನ ರಾತ್ರಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ಭಕ್ತಿಭಾವಪೂರ್ಣವಾಗಿ ನೆರವೇರಲಿದೆ.
ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) “ಗೋ ಫಾರ್ ಗೋಲ್ಡ್–2026” ಎಂಬ ತನ್ನ ವಾರ್ಷಿಕ ಅಥ್ಲೆಟಿಕ್ ಮೀಟ್ ಅನ್ನು 2026 ಏಪ್ರಿಲ್ 07 ರಂದು ಮಂಗಳವಾರ ಬೆಳಿಗ್ಗೆ 9:00 ಗಂಟೆಗೆ ಕಾಲೇಜಿನ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ವಿಭಾಗ ಹಾಗೂ ಸ್ಪೋರ್ಟ್ಸ್ & ವೆಲ್ನೆಸ್ ವಿಭಾಗ ಆಯೋಜಿಸಿತು.
ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) ವಾಮಂಜೂರು, ತನ್ನ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ಏಕತೆಯನ್ನು ಆಚರಿಸುವ ಉದ್ದೇಶದಿಂದ “ಮಿಲನ್ 2026” ಎಂಬ ಭವ್ಯ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಕಾರ್ಯಕ್ರಮವು 2026 ಏಪ್ರಿಲ್ 10 ರಂದು ಎಸ್ಜೆಇಸಿ ಆವರಣದಲ್ಲಿ ನಡೆಯಲಿದೆ.
NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ NSUI ನ 56ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ “ಧ್ವಜಾರೋಹಣ” ಕಾರ್ಯಕ್ರಮ ಮಲ್ಲಿಕಟ್ಟೆಯ ಇಂದಿರಾ ಭವನದಲ್ಲಿ ನಡೆಯಿತು.
ರಾಜ್ಯದ ಹವಾಮಾನದಲ್ಲಿ ಮಹತ್ವದ ಏರುಪೇರು ಕಂಡುಬಂದಿದೆ. ಮುಂಬರುವ ಎರಡು ದಿನಗಳ ಹವಾಮಾನ ಮುನ್ಸೂಚನೆಯು ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಪರಿಸ್ಥಿತಿಗಳನ್ನು ಸೂಚಿಸಿದೆ.
ಟಿಯಾನ್ ಶಾನ್ ಪರ್ವತ ಶ್ರೇಣಿಗಳ ಮೈ ನಡುಗಿಸುವ ಚಳಿ, ಆಮ್ಲಜನಕದ ಕೊರತೆ ಮತ್ತು ಅತಿನೇರಳೆ ಕಿರಣಗಳ ನಡುವೆಯೂ ಸವಾಲು ಹಾಕಿ ಬೆಳೆಯುವ ಏಕೈಕ ಸಸ್ಯ ‘ಹಿಮ ಕಮಲ’. ಸುಮಾರು 10,000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಮಾತ್ರ ಕಂಡುಬರುವ ಈ ಗಿಡವು ಅರಳಲು ಬರೋಬ್ಬರಿ 5 ರಿಂದ 8 ವರ್ಷ ಬೇಕು.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು ಎರಡೂ ಕ್ಷೇತ್ರಗಳಿಂದ ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಲೆಬನಾನ್ ಮೇಲೆ ಕೇವಲ 10 ನಿಮಿಷಗಳಲ್ಲಿ ಇಸ್ರೇಲ್ ವಾಯುಪಡೆ 100 ಕ್ಷಿಪಣಿ ದಾಳಿ ನಡೆಸಿದೆ. ರಾಜಧಾನಿ ಬೈರೂತ್ ಮಧ್ಯಭಾಗ, ಬೆಕಾ ವ್ಯಾಲಿ ಮತ್ತು ದಕ್ಷಿಣ ಲೆಬನಾನ್ನ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.