ಕಾನ್ಪುರ: “ನಾನು ಠಾಕೂರ್, ನನ್ನ ಜೊತೆ ಆಟವಾಡಬೇಡಿ” ಗ್ರಾಹಕನಿಗೆ ಜಾತಿ ಅಹಂಕಾರ ತೋರಿಸಿ ಬ್ಯಾಂಕ್ ಉದ್ಯೋಗಿ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ.
ಜಾತಿ ನಿಂದನೆ ಹೇಳಿಕೆ ನೀಡಿದ HDFC ಉದ್ಯೋಗಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬ್ಯಾಂಕಿಗೆ ಬಂದ ಗ್ರಾಹಕನ ಮೇಲೆ ಮಹಿಳಾ ಸಿಬ್ಬಂದಿ ರೇಗಿದ್ದಾರೆ.ನಾನು ಠಾಕೂರ್ ನನ್ನ ಜೊತೆ ಆಟವಾಡಬೇಡ ಎಂದು ಜಾತಿ ದರ್ಪವನ್ನು ಮಹಿಳೆ ತೋರಿಸಿದ್ದಾರೆ. ಮಹಿಳೆಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

