ಚಾಮರಾಜನಗರ: ಮಲೆ ಮಹದೇಶ್ವರ ಪಾದಯಾತ್ರಿಗಳ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೊನ್ನಾಚ್ಚಿ ಕ್ರಾಸ್ ಬಳಿ ನಡೆದಿದೆ.
ಮತ್ತೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚನ್ನಪಟ್ಟಣ ಮೂಲದ ಶ್ರೇಯಸ್ ಮೇಲೆ ಚಿರತೆ ದಾಳಿ ಮಾಡಿದೆ. ಬಾಲಕ ಕುಟುಂಬದವರೊಂದಿಗೆ ಪಾದಯಾತ್ರೆ ಬಂದಿದ್ದನು. ಪಾದಯಾತ್ರಿಗಳು ಗುಂಪುಗುಂಪಾಗಿ ಹೋಗುತ್ತಿದ್ದ ವೇಳೆಯೇ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಮತ್ತೇ ಆತಂಕ ಸೃಷ್ಟಿಯಾಗಿದೆ. ಜೋರಾಗಿ ಕಿರುಚಿಕೊಂಡ ಹಿನ್ನಲೆ ಸ್ಥಳದಿಂದ ಚಿರತೆ ಓಡಿ ಹೋಗಿದೆ.
ಪಾದಯಾತ್ರಿಗಳಿಗೆ ಮತ್ತೇ ಚಿರತೆ ಆತಂಕ ಉಂಟಾಗಿದೆ. ಈಗಾಗಲೇ ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಾಲ್ಕು ಜನರನ್ನು ಒಳಗೊಂಡ ತಂಡವನ್ನು ಅರಣ್ಯಾಧಿಕಾರಿಗಳು ನೇಮಕ ಮಾಡಿದ್ದರು. ಪೊಲೀಸ್, ಅರಣ್ಯ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳ ನೇಮಕ ಮಾಡಲಾಗಿತ್ತು. ಬಾಲಕನಿಗೆ ಮಲೆ ಮಹದೇಶ್ವರ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

