ಗುಂಡ್ಲುಪೇಟೆ: ಚಾಮರಾಜನಗರದಿಂದ ತೆರಕಣಾಂಬಿ ಮಾರ್ಗವಾಗಿ ಗುಂಡ್ಲುಪೇಟೆಗೆ ಬರ್ತಿದ್ದ ಕೆ ಎಸ್ ಆರ್ಟಿಸಿ ಬಸ್ಸಿನ ಆಕ್ಸೆಲ್ ಕಟ್ಟಾಗಿದ್ದು ಚಾಲಕನ ಜಾಗರೂಕತೆಯಿಂದ ಬಾರಿ ಅನಾಹುತವೊಂದು ತಪ್ಪಿದೆ.

ಜಿಲ್ಲಾ ಕೇಂದ್ರದಿಂದ ಗುಂಡ್ಲುಪೇಟೆಗೆ ಬರುತ್ತಿದ್ದ ಬಸ್ ತೆರಕಣಾಂಬಿ ಜೆ ಎಸ್ ಎಸ್ ಶಾಲೆ ಬಳಿ ಆಕ್ಸೆಲ್ ಕಟ್ ಆದ ಹಿನ್ನೆಲೆ ನಿಯಂತ್ರಣ ತಪ್ಪಿದೆ, ಕೂಡಲೇ ಜಾಗೃತನಾದ ಬಸ್ ಚಾಲಕ ಯಾವುದೇ ಅನಾಹುತಕ್ಕೆ ಆಸ್ಪದ ಕೊಡದೆ ನಿಧಾನಗತಿಯಲ್ಲಿ ರಸ್ತೆ ಬದಿಗೆ ನಿಲ್ಲಿಸಿ ಬಾರಿ ಅನಾಹುತವನ್ನ ತಪ್ಪಿಸಿದ್ದಾರೆ.

ಯೋಗ್ಯವಲ್ಲದ ಬಸ್ಗಳು ರಸ್ತೆಗೆ ಇಳಿಯದಿರಲಿ: ಸಾರಿಗೆ ಸಂಸ್ಥೆಯಲ್ಲಿ ಸಂಚಾರಕ್ಕೆ ಯೋಗ್ಯವಲ್ಲದ ಬಸ್ಸುಗಳನ್ನ ರಸ್ತೆಗಿಳಿಸಲಾಗುತ್ತಿದೆ ಆದುದರಿಂದಲೇ ಇಂತಹ ಘಟನೆಗಳು ಸಂಭವಿಸುತ್ತಿವೇ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದೆ.

ಹಾಗಾಗಿ ಸಂಚಾರ ಸಾಮರ್ಥ್ಯ ಕಳೆದುಕೊಂಡಿರುವ ಬಸ್ಸುಗಳನ್ನ ಬಳಕೆ ಮಾಡಬಾರದು, ಹತ್ತು ಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಗಳಷ್ಟು ಕ್ರಮಿಸಿರುವ ಬಸ್ಸುಗಳನ್ನ ಗ್ರಾಮಾಂತರ ಪ್ರದೇಶಗಳ ಕಡೆ ಬಿಡುವುದರಿಂದ ಅನಾಹುತಗಳು ಸಂಭವಿಸಬಹುದು ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಪಟ್ಟಣ ನಿವಾಸಿ ಮಂಜುನಾಥ್ ಆಗ್ರಹಿಸಿದ್ದಾರೆ.