Bengaluru 24°C
Ad

ಟ್ರೆಡ್‌ಮಿಲ್‌ನಿಂದ ಜಾರಿ ಜಿಮ್‌ನ ಕಿಟಕಿಯಿಂದ ಹೊರಬಿದ್ದು ಯುವತಿ ಮೃತ್ಯು

ಟ್ರೆಡ್‌ಮಿಲ್‌ನಿಂದ ಜಾರಿ 22 ವರ್ಷದ ಯುವತಿ ಜಿಮ್‌ನ ಕಿಟಕಿಯಿಂದ ಹೊರ ಬಿದ್ದು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಜಕಾರ್ತ: ಟ್ರೆಡ್‌ಮಿಲ್‌ನಿಂದ ಜಾರಿ 22 ವರ್ಷದ ಯುವತಿ ಜಿಮ್‌ನ ಕಿಟಕಿಯಿಂದ ಹೊರ ಬಿದ್ದು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಪಶ್ಚಿಮ ಕಾಲಿಮಂಟನ್‌ನ ಪೊಂಟಿಯಾನಕ್‌ನಲ್ಲಿರುವ ಜಿಮ್‌ನ ಮೂರನೇ ಮಹಡಿಯ ಕಿಟಕಿಯಿಂದ ಯುವತಿ ಬಿದ್ದು ಮೃತಪಟ್ಟಿದ್ದಾಳೆ. ಬೆಚ್ಚಿಬೀಳಿಸುವ ದೃಶ್ಯದ ವಿಡಿಯೋ ವೈರಲ್‌ ಆಗಿದೆ.

ಯುವತಿ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಳು. ಈ ವೇಳೆ ಟವೆಲ್‌ನಿಂದ ತನ್ನ ಮುಖ ಒರೆಸಲು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಈ ವೇಳೆ ಸಮತೋಲನ ಕಳೆದುಕೊಂಡು ಹಿಂದಕ್ಕೆ ಸರಿದು, ತೆರೆದ ಕಿಟಕಿಯಿಂದ ಹೊರಬಿದ್ದು ಸಾವಿಗೀಡಾಗಿದ್ದಾಳೆ.

ಕೆಳಗೆ ಬಿದ್ದ ಯುವತಿ ತಲೆಗೆ ಗಂಭೀರ ಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಯುವತಿ ಉಸಿರು ಚೆಲ್ಲಿದ್ದಳು. ಮರಣೋತ್ತರ ಪರೀಕ್ಷೆ ವೇಳೆ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು. ಸೀಳು ಸಹ ಕಂಡುಬಂದಿತ್ತು. ಟ್ರೆಡ್‌ಮಿಲ್ ಮತ್ತು ಕಿಟಕಿಯ ನಡುವಿನ ಅಂತರ ಕೇವಲ 60 ಸೆಂ.ಮೀ ಎಂದು ತನಿಖೆಯಿಂದ ತಿಳಿದುಬಂದಿದೆ.

Ad
Ad
Nk Channel Final 21 09 2023
Ad