Bengaluru 24°C
Ad

ರೇಣುಕಾಸ್ವಾಮಿ ಪ್ರಕರಣದ ಹಾದಿಯನ್ನು ನೋಡಿದರೆ ದರ್ಶನ್ ದುಡುಕಿದ್ರು ಎಂದ ಶ್ರುತಿ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧನವಾಗಿದ್ದು, ಈ ಬಗ್ಗೆ ಹಿರಿಯ ನಟಿ ಶ್ರುತಿ ಮಾತನಾಡಿ,ಇದನ್ನು ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಪ್ರಕರಣ ಎರಡು ಫ್ಯಾಮಿಲಿ ಸಂಬಂಧಿಸಿದ್ದು ಮಾತ್ರವಲ್ಲ. ಇದರಿಂದ ಇಡೀ ಫ್ಯಾಮಿಲಿ ಮಂಕಾಗಿದೆ ಎಂದರು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧನವಾಗಿದ್ದು, ಈ ಬಗ್ಗೆ ಹಿರಿಯ ನಟಿ ಶ್ರುತಿ ಮಾತನಾಡಿ,ಇದನ್ನು ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಪ್ರಕರಣ ಎರಡು ಫ್ಯಾಮಿಲಿ ಸಂಬಂಧಿಸಿದ್ದು ಮಾತ್ರವಲ್ಲ. ಇದರಿಂದ ಇಡೀ ಫ್ಯಾಮಿಲಿ ಮಂಕಾಗಿದೆ ಎಂದರು.

Ad
300x250 2

ದರ್ಶನ್ ಕಷ್ಟದಿಂದ ಬಂದು ಚಿತ್ರರಂಗದಲ್ಲಿ ಬೆಳೆದವರು. ಪ್ರತಿ ಸಿನಿಮಾಗೂ ದರ್ಶನ್ ಹಾರ್ಡ್ ವರ್ಕ್ ಮಾಡುತ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಅರಿವಿದೆ. ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್ ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು.ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದು ಶ್ರುತಿ ಮಾತನಾಡಿದರು.

ರೇಣುಕಾಸ್ವಾಮಿ ಪ್ರಕರಣದ ಹಾದಿಯನ್ನು ನೋಡಿದರೆ ದರ್ಶನ್ ದುಡುಕಿದ್ರು ಅನಿಸುತ್ತದೆ. ಸದ್ಯ ವಿಚಾರಣೆ ನಡೆಯುತ್ತದೆ. ಏನಾಗಲಿದೆ ಎಂದು ಕಾದುನೋಡೋಣ. ನೊಂದ ಕುಟುಂಬಕ್ಕೂ ನ್ಯಾಯ ಸಿಗಬೇಕು ಎಂದು ಕಾಟೇರ ನಟಿ ಶ್ರುತಿ ಮಾತನಾಡಿದ್ದಾರೆ.

Ad
Ad
Nk Channel Final 21 09 2023
Ad