Ad

30 ಸಾವಿರ ಅಡಿ ಎತ್ತರದಿಂದ 9 ಸಾವಿರ ಅಡಿಗೆ ಇಳಿದ ವಿಮಾನ : ಪ್ರಯಾಣಿಕರು ಅಸ್ವಸ್ಥ

ತೈವಾನ್​ಗೆ ತೆರಳುತ್ತಿದ್ದ ಕೊರಿಯನ್ ಏರ್​ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಮಾನ ಏಕಾಏಕಿ 30 ಸಾವಿರ ಅಡಿಯಿಂದ 9 ಸಾವಿರ ಅಡಿಗೆ ಇಳಿದಿದ್ದು, ಪ್ರಯಾಣಿಕರ ಸ್ಥಿತಿ ಅಸ್ತವ್ಯಸ್ತಗೊಂಡಿದೆ.

ತೈವಾನ್​ಗೆ ತೆರಳುತ್ತಿದ್ದ ಕೊರಿಯನ್ ಏರ್​ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಮಾನ ಏಕಾಏಕಿ 30 ಸಾವಿರ ಅಡಿಯಿಂದ 9 ಸಾವಿರ ಅಡಿಗೆ ಇಳಿದಿದ್ದು, ಪ್ರಯಾಣಿಕರ ಸ್ಥಿತಿ ಅಸ್ತವ್ಯಸ್ತಗೊಂಡಿದೆ.

Ad
300x250 2

ಈಗಾಗಲೇ ಪ್ರಯಾಣಿಕರಿಗೆ ಆಕ್ಸಿಜನ್​ ಮಾಸ್ಕ್​ ಹಾಕಿಕೊಳ್ಳಲು ಸೂಚನೆ ನೀಡಲಾಗಿದ್ದರೂ ಕೂಡ, ಪ್ರಯಾಣಿಕರ ಕಿವಿ, ಹಾಗೂ ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ಸಾಧ್ಯವಾಗಿಲ್ಲ. ಪೈಲಟ್​ ಕೂಡಲೇ ವಿಮಾನವನ್ನು ಹಿಂದಕ್ಕೆ ತಿರುಗಿಸಲು ನಿರ್ಧರಿಸಿದರು, ಇಂಚೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ತಕ್ಷಣ 13 ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ದಕ್ಷಿಣ ಕೊರಿಯಾದ ಯೋನ್​ಹಾಪ್ ಸುದ್ದಿಸಂಸ್ಥೆ ಪ್ರಕಾರ, ಶನಿವಾರ ಕೊರಿಯನ್ ಏರ್​ ವಿಮಾನ ಕೆಇ-189 ಕ್ಯಾಬಿನ್ ಪ್ರೆಶರೈಸೇಷನ್​ ಸಿಸ್ಟಮ್​ನಲ್ಲಿ ಹಠಾತ್ ದೋಷ ಕಂಡು ಬಂದಿತ್ತು.

Ad
Ad
Nk Channel Final 21 09 2023
Ad