Ad

ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ : ಬೆಂಗಳೂರಿನಲ್ಲಿ ಜ್ವರಕ್ಕೆ ಇಬ್ಬರು ಸಾವು

ರಾಜ್ಯದಲ್ಲಿ ದಿನ ದಿನಕ್ಕೂ ಡೆಂಗ್ಯೂ ಜ್ವರ ಏರಿಕೆಯಾಗುತ್ತಲೆ ಇದೆ. ಇದೀಗ ಡೆಂಗ್ಯೂ ಜ್ವರಕ್ಕೆ ನಗರದಲ್ಲಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಮತ್ತು 27 ವರ್ಷದ ಯುವಕ ಮೃತಪಟ್ಟಿದ್ದಾರೆ. ನಾಳೆ ಬಿಬಿಎಂಪಿ ಅಧಿಕಾರಿಗಳು ಡೆತ್ ಆಡಿಟ್ ಮಾಡಲಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ದಿನ ದಿನಕ್ಕೂ ಡೆಂಗ್ಯೂ ಜ್ವರ ಏರಿಕೆಯಾಗುತ್ತಲೆ ಇದೆ. ಇದೀಗ ಡೆಂಗ್ಯೂ ಜ್ವರಕ್ಕೆ ನಗರದಲ್ಲಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಮತ್ತು 27 ವರ್ಷದ ಯುವಕ ಮೃತಪಟ್ಟಿದ್ದಾರೆ. ನಾಳೆ ಬಿಬಿಎಂಪಿ ಅಧಿಕಾರಿಗಳು ಡೆತ್ ಆಡಿಟ್ ಮಾಡಲಿದ್ದಾರೆ. ಈ ಕುರಿತಾಗಿ ಟಿವಿ9ಗೆ ಬಿಬಿಎಂಪಿ ಮೂಲಗಳಿಂದ ಮಾಹಿತಿ ನೀಡಲಾಗಿದೆ. ಡೆಂಗ್ಯೂಗೆ ಹಾವೇರಿಯಲ್ಲಿ ಮೊದಲ ಸಾವು ಸಂಭವಿಸಿತ್ತು. ಇದೀಗ ಬೆಂಗಳೂರಿನಲ್ಲಿ ಸಂಭವಿಸಿದೆ.

Ad
300x250 2

ಸಾವಿನ ಜತೆಗೆ ಬೆಂಗಳೂರಿನಲ್ಲೂ ಡೆಂಗ್ಯೂ ಕೇಸ್​​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲೇ 2457 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಜಾಗ್ರತೆಯಿಂದ ಇರಿ ಎಂದು ಹೇಳಿದ್ದಾರೆ.

 

Ad
Ad
Nk Channel Final 21 09 2023
Ad