Ad

ಹಾವೇರಿ ಅಪಘಾತ : 9 ಮಂದಿ ದುರ್ದೈವಿಗಳ ಸಾಮೂಹಿಕ ಅಂತ್ಯಸಂಸ್ಕಾರ

ಹಾವೇರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರವನ್ನು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆಸಲಾಯಿತು.

ಶಿವಮೊಗ್ಗ : ಹಾವೇರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರವನ್ನು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆಸಲಾಯಿತು.

Ad
300x250 2

ಗ್ರಾಮದ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು.ಮೃತ ದೇಹಗಳನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಬಂದು ಸಾಮೂಹಿಕವಾಗಿ ಸಂಬಂಧಿಕರು ಅಗ್ನಿಸ್ಪರ್ಶ ಮಾಡಿದರು. ಸಾವಿರಾರು ಜನರ ಅಶ್ರು ತರ್ಪಣದ ನಡುವೆ ಮೃತರನ್ನು ನೆನೆದು ಸಂಬಂಧಿಕರು ಗೋಳಿಟ್ಟರು.

ಅಂತ್ಯಸಂಸ್ಕಾರ ದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಪಾಲ್ಗೊಂಡು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತಲಾ 50 ಸಾವಿರ ನೆರವು ನೀಡಿದರು.
ಮೃತಪಟ್ಟಿದ್ದ ಆದರ್ಶ್, ವಿಶಾಲಾಕ್ಷಿ, ನಾಗೇಶ್ ರಾವ್, ಸುಭದ್ರಾ ಬಾಯಿ, ಮಾನಸಾ, ರೂಪಾ ಬಾಯಿ, ಭಾಗ್ಯಬಾಯಿ, ಅರುಣ್ ಕುಮಾರ್, ಮಂಜುಳಾ ಮೃತದೇಹಗಳನ್ನು 4 ಆಂಬುಲೆನ್ಸ್ ಗಳಲ್ಲಿ ಹುಟ್ಟೂರಿಗೆ ತರಲಾಯಿತು

Ad
Ad
Nk Channel Final 21 09 2023
Ad