ವಿಯೆಟ್ನಾಂ: ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯ ಜನಪ್ರಿಯ ಪ್ರವಾಸಿ ತಾಣವಾದ ಕಿಸ್ಸಿಂಗ್ ರಾಕ್ಸ್” ಕುಸಿಯುವ ಅಪಾಯದಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ಜುಲೈನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ ಸಮುದ್ರ ನೀರಿನ ಮಟ್ಟ ಏರುವಿಕೆ ಹಾಗೂ ಮೀನುಗಾರಿಕೆ ದೋಣಿಗಳು ಕಲ್ಲುಗಳ ಹತ್ತಿರದಲ್ಲಿ ಪ್ರಯಾಣಿಸುವ ಕಾರಣ ಬಂಡೆಗಳು ಸವೆದು ಹೋಗುತ್ತವೆ ಎಂದು ವರದಿಯಾಗಿದೆ.
ಅವಳಿ ಬಂಡೆಗಳು ಒಂದಕ್ಕೊಂದು ಎದುರಾಗಿದ್ದು, ಪರಸ್ಪರ ಸ್ಪರ್ಶಿಸಿ ಮುತ್ತು ನೀಡುತ್ತಿರುವಂತೆ ಕಾಣುತ್ತವೆ. ಕ್ವಾಂಗ್ ನಿನ್ಹ್ ಪ್ರಾಂತ್ಯದ ಹಾ ಲಾಂಗ್ ಕೊಲ್ಲಿಯು ನೂರಾರು ಸಣ್ಣ ದ್ವೀಪಗಳಿಗೆ ನೆಲೆಯಾಗಿದ್ದು, ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. 2019 ರಲ್ಲಿ ನಾಲ್ಕು ಮಿಲಿಯನ್ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಬಂಡೆಗಳಿಂದ ಕೇವಲ 19 ಮೀಟರ್ ಅಂತರದಲ್ಲಿ ದೋಣಿಗಳು ನಿಲುಗಡೆಗೊಳ್ಳುತ್ತಿವೆ. ಇದು ಬಂಡೆಗಳ ಸವೆತಕ್ಕೆ ಕಾರಣವಾಗಿದೆ ಎಂದು ಈ ಕುರಿತು ಸಂಶೋಧನೆ ನಡೆಸುತ್ತಿರುವ ಹೋ ಟಿಯೆನ್ ಚುಂಗ್ ಹೇಳಿದ್ದಾರೆ.